ಮಾನ್ವಿ,ಜು.೦೧-
ಜುಲೈ ೨ ರಂದು ವಚನ ಪಿತಾಮಹ ಡಾ.ಫ.ಗು.ಹಳಿಕಟ್ಟೆಯವರ ಜಯಂತಿಯನ್ನು ತಾಲೂಕು ಆಡಳಿತವತಿಯಿಂದ ಆಚರಿಸಲಾಗುವುದು ಹಾಗೂ ಜು.೩ ರಂದು ಹಡಪದ ಹಪ್ಪಣ್ಣ ಜಯಂತಿಯನ್ನು ತಾಲೂಕು ಆಡಳಿತ ಹಾಗೂ ಹಡಪದ ಹಪ್ಪಣ್ಣ ಸಮಾಜದವರೊಂದಿಗೆ ಆಚರಿಸಲಾಗುವುದು ಎಂದು ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ. ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಾಲೂಕಿನ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸರಕಾರಿ ಜಯಂತಿಗಳನ್ನು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಿ ನಂತರ ಟೌನ್ ಹಾಲ್‌ನಲ್ಲಿ ತಾಲೂಕು ಆಡಳಿತದಿಂದ ನಡೆಯುವ ಜಯಂತಿಗಳಲ್ಲಿ ಭಾಗವಹಿಸಬೇಕು.
ಜು.೩ ರಂದು ಪಟ್ಟಣದ ಬಸವ ವೃತ್ತದಿಂದ ಟೌನ್ ಹಾಲ್‌ವರೆಗೆ ಹಡಪದ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ನಡೆಸಿ ನಂತರ ವೇದಿಕೆಯ ಕಾರ್ಯಕ್ರಮ ಹಾಗೂ ಹಡಪದ ಹಪ್ಪಣ್ಣ ನವರ ಜೀವನ ಹಾಗೂ ಸಂದೇಶಗಳ ಕುರಿತು ಉಪನ್ಯಾಸಕರಿಂದ ಉಪನ್ಯಾಸ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವೆಂಕಟಸ್ವಾಮಿ, ತಾಲೂಕಿನ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಮತ್ತು ಹಡಪದ ಹಪ್ಪಣ್ಣ ಸಮಾಜದ ಗೌರವ ಅಧ್ಯಕ್ಷ ವೆಂಕಟೇಶ, ನಾಗಹರಾಜ, ಶ್ರೀಮಂತ, ವಿರೇಶ, ಪಂಪಾಪತಿ, ಅಪ್ಪಣ್ಣ, ಪ್ರಭುರಾಜ ಕೋಡ್ಲಿ ಸೇರಿದಂತೆ ವಿವಿಧ ಸಮಾಜದ ಗಣ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.