ವಿವಿಧ ಚೆಕ್ ಪೋಸ್ಟ್ ಗಳಲ್ಲಿ 16.60 ಲಕ್ಷ ನಗದು ಹಣ ವಶ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.05: ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಾಲ್ಲೂಕಿನ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಒಟ್ಟು 16.60 ಲಕ್ಷ ರೂ. ನಗದು, ಎರಡು ಪಕ್ಷಗಳು ನೀತಿ ಸಂಹಿತಿ ಉಲ್ಲಂಗಿಸಿ ಸಾಗಿಸುತ್ತಿದ್ದ ಪ್ರಚಾರ ಸಾಗ್ರಿಗಳನ್ನು ಜಪ್ತಿಗೋಳಿಸಿ ಪಕ್ಷದ ವಿರುದ್ದ ಪ್ರಕರಣ ದಾಖಲಿಸಲಾಗಿದೆಂದು ಚುನಾವಣಾ ಅಧಿಕಾರಿ ಸತೀಶ ಹೇಳಿದರು.
ನಗರದ ಚುನಾವಣೆ ಕಛೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾರ್ಚ್ 29 ರಿಂದ ಪೊಲೀಸ್, ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಜಾಗೃತ ದಳಗಳು ತಾಲ್ಲೂಕಿನಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿಯವರೆಗೆ ಇಬ್ರಾಹಿಂಪುರ ಚೆಕ್ ಪೋಸ್ಟ್ನಲ್ಲಿ 5.35 ಲಕ್ಷ, ನಗದು, ಕೆ.ಬೆಳಗಲ್ ಚೆಕ್ ಪೋಸ್ಟ್ನಲ್ಲಿ 82ಸಾವಿರ, ವತ್ತುಮುರುಣಿ ಚೆಕ್ ಪೋಸ್ಟ್ನಲ್ಲಿ 15.78 ಲಕ್ಷ ರೂ ವಿವಿಧ ಕಡೆಗೆ ಸೇರಿದಂತೆ ನಗದು ಒಟ್ಟು 21.95 ಲಕ್ಷ ರೂ. ಮೌಲ್ಯ ಜಪ್ತಿ ಮಾಡಿದೆ.
ಚುನಾವಣಾ ವೇಳಾಪಟ್ಟಿ ಘೋಷಣೆಗೂ ಮುನ್ನ 9.63 ಲಕ್ಷ ನಗದು, 1.35 ಲಕ್ಷ ಬೆಲೆಯ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಇದ್ದರು.

One attachment • Scanned by Gmail