ವಿವಿಧ ಗ್ರಾಮಗಳಲ್ಲಿ ತಿಪ್ಪರಾಜು ಪರವಾಗಿ ಮತಯಾಚನೆ

ರಾಯಚೂರು,ಏ.೨೭- ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಸಾದಾಪೂರ, ಸೀಕಲ್, ಜೆ.ಹನುಮಾಪೂರ, ಹೆಂಬೆರಾಳ, ಹೆಚ್.ತಿಮ್ಮಾಪೂರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರ ಪರವಾಗಿ ಮುಖಂಡರು, ಕಾರ್ಯಕರ್ತರು ಭಾರೀ ಪ್ರಚಾರ ನಡೆಸಿದರು. ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.
ಸಾದಾಪೂರು : ಸಾದಾಪೂರ ಗ್ರಾಮದಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮ ನಾರಾಯಣಗೌಡ , ಶಿವಕುಮಾರ ವಕೀಲರು ದಿನ್ನಿ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಗ್ರಾಮದಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈ ಬಾರಿ ರಾಯಚೂರು ಗ್ರಾಮೀಣ ದಲ್ಲಿ ಕಮಲ ಅರಳುವ ವಿಶ್ವಾಸವನ್ನು ಜನರು ವ್ಯಕ್ತಪಡಿಸಿದರು.
ಸೀಕಲ್ ಗ್ರಾಮದಲ್ಲಿ ಬೈಕ್ ರ್‍ಯಾಲಿ:
ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸೀಕಲ್ ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರ ಪರವಾಗಿ ಸಾವಿರಾರು ಬೆಂಬಲಿಗರು, ಅಭಿಮಾನಿಗಳು ಬಿರಿಸಿನ ಪ್ರಚಾರ ನಡೆಸಿದರು. ಸೀಕಲ್ ಸರ್ಕಲ್‌ನಿಂದ ನೂರಾರು ಬೈಕ್‌ಗಳೊಂದಿಗೆ ಬೃಹತ್ ಮಟ್ಟದಲ್ಲಿ ರ್‍ಯಾಲಿ ಮೂಲಕ ಸಾಗಿ ಚಾಪುಡಿ ಕ್ಯಾಂಪ್, ಸೀಕಲ್, ಗ್ರಾಮದಲ್ಲಿ ಪ್ರಚಾರ ಮಾಡಿದರು. ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷದ ಸಿದ್ದಾಂತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಸಾದಾಪೂರ ಗ್ರಾಮದಲ್ಲಿ ಜೆಸಿಬಿ ಮೂಲಕ ಹೂ ಮಳೆ ಸುರಿಸುವ ಮೂಲಕ ತಿಪ್ಪರಾಜು ಅವರಿಗೆ ಭವ್ಯ ಸ್ವಾಗತ ಮಾಡಲಾಯಿತು.
ನಂತರ ರಾಮನಾರಾಯಣ ಗೌಡ ಸಾದಾಪೂರ, ಶಿವ ಕುಮಾರ ವಕೀಲರು ದಿನ್ನಿ ಅವರು ನುರಾರು ಕಾರ್ಯಕರ್ತರೊಂದಿಗೆ ತಿಪ್ಪರಾಜು ಹವಲ್ದಾರ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಮಿರ್ಜಾಪೂರ ಶಂಕರಗೌಡ, ಉಮಾಕಾಂತ ಸಾಹುಕಾರ, ಮೌನೇಶ ವಕೀಲರು, ನಾರಾಯಣ ರಾವ್ ಕುಲಕರ್ಣಿ, ಜಗದೀಶ ವಕೀಲರು, ಶಾಂತಪ್ಪ ಕಪಗಲ್, ಮಹಾಂತೇಶ ನಾಯಕ, ಸೇರಿದಂತೆ ಊರಿನ ಹಿರಿಯರು, ಗ್ರಾಮ ಪಂಚಾಯತ ಸದಸ್ಯರು ಭಾಗಿಯಾಗಿದ್ದರು
ವಿವಿಧ ಗ್ರಾಮಗಳಲ್ಲಿ ಮತ ಯಾಚನೆ:
ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಅವರ ಪರವಾಗಿ ಮುಖಂಡರು, ಕಾರ್ಯಕರ್ತರು ಮತಯಾಚನೆ ಮಾಡಿದರು. ರಾಯಚೂರು ಗ್ರಾಮೀಣ ಕ್ಷೇತ್ರದ ಬೆವಿನಬೆಂಚಿ ಹನುಮಂತ ಮತ್ತು ಜೆ. ಹನುಮಪುರು ಶರಣು ಗೌಡ, ಬುದೆನ್ ಗೌಡ ಹೆಂಬೇರಳ್ ಗ್ರಾಮದ ಶಿವಶರಣ ಹಾಗೂ ಜೆ. ತಿಮ್ಮಪುರು ಪ್ರಭು, ಹೆಚ್. ತಿಮ್ಮಪುರು ಮಲ್ಲೇಶ್ ಅವರು ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎನ್.ಬಿ. ಶರಣು, ನಿಶಾಂತ್ ಹಿರೇಮಠ ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುನೀತಾ, ಮಹಾದೇವ ಹಾಗೂ ಇನ್ನಿತರರು ಭಾಗಿಯಾಗಿದ್ದರು.