ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ

ರಾಯಚೂರು,ಏ.೨೬- ರಾಯಚೂರು ನಗರದ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿನಯ್ ಕುಮಾರ್ ಅವರ ಮಿಟ್ಟಿಮಲ್ಕಾಪುರ್ ,ದೇವನಪಲ್ಲಿ ರಾಜಲಬಂಡ, ಬೀಜ್ಜನಗೇರಿ, ಸಿದ್ದಾಪುರ ಗ್ರಾಮಗಳಲ್ಲಿ ಅದ್ದೂರಿಯಾಗಿ ಪ್ರಚಾರ ಮಾಡಲಾಯಿತು ಈ ಸಂದರ್ಭದಲ್ಲಿ ಜೆಡಿಎಸ್‌ಗೆ ಮತ ನೀಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಅವರು ಮಾತನಾಡಿ ಇವತ್ತು ರಾಯಚೂರು ನಗರಕ್ಕೆ ಸುಮಾರು ೫೦೦೦ ಮನೆಗಳು ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳ ಹಣ ಬಿಡುಗಡೆಯಾಗಿತ್ತು ಆದರೆ ಶಾಸಕ ಶಿವರಾಜ್ ಪಟೇಲ್ ಮತ್ತು ಮೊಹಮ್ಮದ್ ಶಾಲಂ ಕಾಂಗ್ರೆಸ್ ಅಭ್ಯರ್ಥಿ ಇವರಿಬ್ಬರು ಸೇರಿ ನೂರಾರು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಇವತ್ತು ಯಾವುದೇ ಮನೆಗಳನ್ನು ಕಟ್ಟದೆ ಬಡವರಿಗೆ ಮೋಸ ಮಾಡಿ ಇವರಿಬ್ಬರು ರಾಯಚೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುದು ರಾಯಚೂರು ನಗರದ ಜನತೆಯ ದುರದೃಷ್ಟಕರ ಇಂತಹ ಭ್ರಷ್ಟಾಚಾರಿಗಳನ್ನು ಸಲ್ಲಿಸಬೇಕು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿದ್ದಾರೆ ಇದನ್ನು ರಾಯಚೂರಿನ ಜನತೆ ಅರಿತುಕೊಳ್ಳಬೇಕೆಂದು ಹೇಳಿದರು.
ಎನ್ ಶಿವಶಂಕರ್ ಕಾರ್ಯಾಧ್ಯಕ್ಷರು ವಕೀಲರು ಮಾತನಾಡಿ ಕುಮಾರಣ್ಣವರು ಮುಖ್ಯಮಂತ್ರಿಯಾದರೆ ಪ್ರತಿ ರೈತರ ಒಂದು ಎಕರೆ ಹೊಲಕ್ಕೆ ಹತ್ತು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಬೀಜ ಗೊಬ್ಬರ ನೀಡಲು ನೀಡುತ್ತೇವೆ ಮತ್ತು ರೈತರ ಮಗಳನ್ನು ಮದುವೆಯಾದರೆ ೨ ಲಕ್ಷ ರೂಪಾಯಿ ಮದುವೆಯಾಗಿ ನೀಡುತ್ತಾರೆ ಎಂದು ಘೋಷಣೆ ಮಾಡಿದ್ದಾರೆ ರೈತರ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕೆಂದು ಹೇಳಿದರು.
ರಾಯಚೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿನಯ್ ಕುಮಾರ್ ಅವರು ಮಾತನಾಡಿ ರಾಯಚೂರಿನ ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ನಡೆಸುತ್ತಿದ್ದಾರೆ ಇವತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಶಾಸಕರ ಗಣಿತವೆರೆಗೆ ನಮ್ಮ ಶಾಲೆಗೆ ಕಾಂಗ್ರೆಸ್ ಅಭ್ಯರ್ಥಿಯ ಟಿಕೆಟ್ ನೀಡಿದ್ದಾರೆ ಕಾಂಗ್ರೆಸ್ ಪಕ್ಷದ ಮುಖಂಡ ಒಬ್ಬರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷವನ್ನು ಐದು ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದು ಇವತ್ತು ಸತ್ಯವಾಗಿದೆ ಆದಕಾರಣ ಈ ಎರಡು ಪಕ್ಷಗಳನ್ನು ತಿರಸ್ಕರಿಸಿ ನನಗೆ ಮತ್ತೆ ನೀಡುವಂತೆ ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಹಿರಿಯ ಮುಖಂಡ ಈ ಅಂಜಿನಯ್ಯ ಗೌರವ ಅಧ್ಯಕ್ಷ ಯೂಸುಫ್ ಖಾನ್. ಮಹಿಳಾ ಜಿಲ್ಲಾಧ್ಯಕ್ಷರಾದ ಫಾತಿಮಾ, ನರಸಪ್ಪ ಆಶಾಪೂರ ,, ನರಸಿಂಹಲು ಕಟ್ಟಿಮನಿ, , ,ಅಂಜಿನಯ್ಯ ವಕೀಲರು, ಅನಂತ ರಾಜ್ ಗೌಡ ಬಡೇಸಾಬು ದೇವನಪಲ್ಲಿ ಬುಗ್ಗ ರೆಡ್ಡಿ ಇಕ್ಬಾಲ್ ಇಮಾಮ್ ಸಾಬ್, ಜನಾರ್ದನ್ ಪಂಚಮುಖಿ , ವೀರೇಶ ಹನುಮಂತು ಅಂಜಿನಯ್ಯ ಸಾವಿರಾರು ಕಾರ್ಯಕರ್ತರು ಉಪಸಿತದ್ದರು