ವಿವಿಧ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಲು ವಿಷ್ಣುಸೇನಾ ಮನವಿ

ಜೇವರ್ಗಿ :ನ.11:ತಾಲೂಕಿನ ಮೂಲಕ ಅಂಕಲಗಾ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಬೇಕೆಂದು ಬಸ್ ಡಿಪೆÇೀ ವ್ಯವಸ್ಥಾಪಕರಿಗೆ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಜೇವರ್ಗಿ ತಾಲ್ಲೂಕಿನ ಮೋನಾಟಗಾ,ಅಂಕಲಗಾ ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಒದಗಿಸಲು ಮನವಿ ಸಲ್ಲಿಸಲಾಯಿತು ಡಾಕ್ಟರ್ ವಿಷ್ಣು ಸೇನಾ ತಾಲೂಕ್ ಅಧ್ಯಕ್ಷ ಬಸವರಾಜ್ ಬಾಗೆವಾಡಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಶೀಘ್ರವೇ ಬಸ್ ಸೌಕರ್ಯ ಒದಗಿಸಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಬೇಕಾಗಿದೆ ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಶಾಲಾ ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು