ವಿವಿಧ ಗ್ರಾಪಂಗಳಿಗೆ ಕೊಂಡಯ್ಯ ಭೇಟಿ

(ಸಂಜೆವಾಣಿ ಪ್ರತಿನಿಧಿಯಿಂದ)          
ಬಳ್ಳಾರಿ, ನ.06: ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ   ಅವರು ಇಂದು  ಇಲ್ಲಿಗೆ ಅಮೀಪದ ಸೋಮಸಮುದ್ರ, ಕೋಳೂರು, ದಮ್ಮೂರು, ಬಾದನಟ್ಟಿ,ಯರ್ರಂಗಳಿ ಮತ್ತಿತರ  ಗ್ರಾಮ ಪಂಚಾಯಿತಿಗಳಿಗೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ಮಾಡಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಗಳೊಂದಿಗೆ ಮತ್ತು ಪಂಚಾಯಿತಿಯ ಅಧಿಕಾರಿಗಳ ಜೊತೆ ಗ್ರಾಮಗಳ ಅಭಿವೃದ್ದಿ ಕುರಿತಂತೆ ಪ್ರಗತಿ ಪರಿಶೀಲನೆ  ಮತ್ತು ಕುಂದುಕೊರತೆಗಳ ಸಭೆಯನ್ನು ನಡೆಸಿದರು.
ನಂತರ ಮತ್ತೆ ತಾವು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದು ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ನಿರಂಜನ್ ನಾಯ್ಡು,  ವೆಂಕಟೇಶ್ ಹೆಗಡೆ,ಅಯಜ್ ಅಹ್ಮದ್,ಅಸುಂಡಿ ವನ್ನೂರಪ್ಪ, ಪಿ.ಗಾದೆಪ್ಪ, ಪಾರ್ಥಸಾರಥಿ ರೆಡ್ಡಿ, ಕೌಶಿಕ್, ಶಬ್ಬೀರ್, ಆಸಿಫ್, ಹಾಗೂ ಆಯಾ  ಗ್ರಾಮ ಪಂಚಾಯತಿಯ ಹಿರಿಯ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.