ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:- `ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಸೀಮಿತಗೊಳಿಸದೇ ಬಸವ ವಚನ, ತತ್ವಗಳನ್ನು ಪಸರಿಸಲು ನಿತ್ಯವೂ ಆಚರಿಸುವಂತಾಗಬೇಕು. ಆಗ ಮಾತ್ರ ಜೀವನದಲ್ಲಿ ಸಾರ್ಥಕತೆ ಹಾಗೂ ಪರಿವರ್ತನೆ ಕಾಣಲು ಸಾಧ್ಯ’ ಎಂದು ಖ್ಯಾತ ವೈದ್ಯರಾದ ಡಾ.ಎಸ್.ಪಿ.ಯೋಗಣ್ಣ ಅಭಿಪ್ರಾಯಪಟ್ಟರು.
ನಗರದ ರೂಪ ನಗರದಲ್ಲಿರುವ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಜನಸೇವಕ ಯುವ ಬ್ರಿಗೇಡ್ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿವಿಧ ಕ್ಷೇತ್ರದ ಸಾಧಕ ಪೆÇ್ರ.ಸಾಧನಾ ತಂತ್ರಿ(ಶಿಕ್ಷಣ ಕ್ಷೇತ್ರ) ಎಸ್.ಇ.ಗಿರೀಶ್(ಆರೋಗ್ಯ ಕ್ಷೇತ್ರ) ಬನ್ನೂರು ಡಾ. ಮಹೇಂದ್ರ ಸಿಂಗ್ ಕಾಳಪ್ಪ (ಪರಿಸರ ಕ್ಷೇತ್ರ) ಆರ್ ಮಹೇಶ್ ಕುಮಾರ್ (ಸಂಘಟನಾ ಕ್ಷೇತ್ರ) ಮಾಯ ಶಾನ್ ಬಾಗ್ (ಸಾಮಾಜಿಕ ಕ್ಷೇತ್ರ) ಅವರಿಗೆ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು. ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ. ಶರಣರ ಕನಿಷ್ಠ ಒಂದು ವಚನದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡರೂ ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ. ಬಸವನ ತತ್ವಗಳು ಜೀವನಕ್ಕೆ ಆಧಾರ ಎಂದಾದಾಗ ಮಾತ್ರ ಎತ್ತರಕ್ಕೆ ಬೆಳೆಯುತ್ತೇವೆ. ನಾನೂ ಬಸವಣ್ಣನಾಗಬೇಕು ಎಂಬ ಭಾವನೆಗಳು ಅಂತರಂಗದಲ್ಲಿ ಮೂಡಿ ಬಂದಾಗ ಸಮಾಜದಲ್ಲಿ ಆದರ್ಶವಾಗಿ ಬಾಳಲು ಪೂರಕವಾಗುತ್ತದೆ’ ಎಂದರು.
ನಂತರ ಮಾತನಾಡಿದ ಅರುಣ್ ಕುಮಾರ್ ಗೌಡ, ಬಸವಣ್ಣನವರ ವಚನಗಳನ್ನು ನಿತ್ಯ ಕಾಯಕದಲ್ಲಿ ತೊಡಗಿಸಿಕೊಂಡು ಪ್ರತಿಯೊಬ್ಬರೂ ಆಧುನಿಕ ಬಸವಣ್ಣನಾಗಬೇಕು. ನಮ್ಮ ನಡೆ ನುಡಿಗಳಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಾಗಬೇಕು. ವಚನಗಳನ್ನು ಜೀವನಕ್ಕೆ ಸ್ಫೂರ್ತಿದಾಯಕವಾಗಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಭಕ್ತಿ ಭಂಡಾರಿ ಬಸವಣ್ಣನವರ ಅನುಯಾಯಿಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಎಸ್ ಪಿ ಯೋಗಣ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಗೌಡ, ವಿವೇಕಾನಂದ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸವಿತಾ ಗೌಡ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ಡಿ.ರಾಘವೇಂದ್ರ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್
ಶ್ರೀಧರ್, ಪ್ರವೀಣ್ ಕುಮಾರ್, ಮಹದೇವ್ ಸ್ವಾಮಿ, ನಂಜುಂಡಸ್ವಾಮಿ, ಸ್ಪಂದನ, ಚಂದ್ರಶೇಖರ್ ಪಾಟೀಲ್ , ರಕ್ಷಾ ಪ್ರಭು ಹಾಗೂ ಇನ್ನಿತರರು ಹಾಜರಿದ್ದರು.