ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ಸನ್ಮಾನ

ಕೋಲಾರ,ಜೂ,೧೨:ನಗರದ ಗೋಕುಲ ಮಿತ್ರಬಳಗದಿಂದ ಪೊಲೀಸ್, ಪತ್ರಿಕೋದ್ಯಮ,ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ನಗರ ಹೊರವಲಯದ ಇ-ಪ್ಯಾಕ್ಟ್ ಶಿವಕುಮಾರ್ ಅವರ ತೋಟದಲ್ಲಿ ನಡೆದ ಸಮಾಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಸೇವಾ ಪದಕ ವಿಜೇತ ಸುರೇಶ್, ಅಖಿಲ ಭಾರತ ಪತ್ರಿಕಾ ಸಂಪಾದಕರ ಒಕ್ಕೂಟಕ್ಕೆ ದಕ್ಷಿಣ ಭಾರತದಿಂದ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡಿರುವ ಮಹಮದ್ ಯೂನೂಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದುನಿಯಾ ಮುನಿಯಪ್ಪ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಸುರೇಶ್ ಮಾತನಾಡಿ,ಗೋಕುಲ ಮಿತ್ರಬಳಗ ಅಪಾರ ಸಂಖ್ಯೆಯ ಸ್ನೇಹಿತರ ಸಂಘಟನೆಯಾಗಿದ್ದು, ಜಾತಿ,ಧರ್ಮ ಬೇಧವಿಲ್ಲದೇ ಕಾರ್ಯನಿರ್ವಹಿಸುವ ಮೂಲಕ ಸ್ನೇಹದ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಸಿದರು.
ಪತ್ರಕರ್ತ ಮಹಮದ್ ಯೂನೂಸ್ ಮಾತನಾಡಿ, ಗೋಕುಲ ಮಿತ್ರಬಳಗ ಸ್ನೇಹಿತರ ಕೂಟವಾಗಿದ್ದು, ನನ್ನನ್ನು ಗುರುತಿಸಿ ಗೌರವಿಸಿದೆ, ಇಲ್ಲಿ ಸೇರಿರುವ ಎಲ್ಲಾ ಸ್ನೇಹಿತರು ಯಾವುದೇ ಸ್ವಾರ್ಥವಿಲ್ಲದೇ ಸದಾ ಸಂಘಟಿತರಾಗಿ, ಸ್ನೇಹವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತ ಪಡೆಸಿದರು, ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರ
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ನಾವು ಹುಟ್ಟುಹಬ್ಬಗಳ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಎಲ್ಲಾ ಸದಸ್ಯರ ನೆರವಿನಿಂದ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಪಿಡಿಒ ನಾರಾಯಣಸ್ವಾಮಿ, ಚಲಪತಿ ಮತ್ತಿತರರಿಂದ ಮಿಮಿಕ್ರಿ, ಗಾಯನ ಕಾರ್ಯಕ್ರಮ ನಡೆದು ಎಲ್ಲರನ್ನು ರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಸುಧಾಕರ್, ನಗರಸಭೆ ಮಾಜಿ ಅಧ್ಯಕ್ಷ ವಿ.ಕೆ.ರಾಜೇಶ್,ಜೆಡಿಎಸ್ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಗೋಕುಲಮಿತ್ರಬಳಗದ ಮುನಿವೆಂಕಟಯಾದವ್, ಶಿವಕುಮಾರ್,ಪತ್ರಕರ್ತ ಚಾಂದ್‌ಪಾಷಾ, ಕೋ.ನಾ.ಮಂಜುನಾಥ್, ರಾಮಕೃಷ್ಣ, ಮಣಿ,ಬಾಲಾಜಿ, ಬುಜ್ಜಿ, ಪಿಡಿಒ ನಾಗರಾಜ್, ಪಿಡಿಒ ಕೃಷ್ಣಪ್ಪ, ಸರ್ವೋದಯ, ಡಿವಿಡಿ ಶಂಕರ್,ಪ್ಲವರ್ ಶಂಕರ್,ಕ್ಯಾಪ್ಟನ್ ಮಂಜು, ಕೃಷ್ಣಮೂರ್ತಿ, ಕೆಎಸ್‌ಆರ್‌ಟಸಿ ಗಿರಿ, ಸ್ವಾಮಿ,ವೇಣು, ಸಿಎಂಸಿ ಶಂಕರ್,ಶ್ವೇತಾ ಶಂಕರ್,ಚಂದು, ವಿಶ್ವಾಸ್, ಮಲ್ಲಿಕಾರ್ಜುನ್, ವಿನಯ್, ಗಣೇಶ್, ವೆಂಕಟೇಶ್ ಮತ್ತಿತರರಿದ್ದರು.