ವಿವಿಧ ಕ್ಷೇತ್ರಗಳಲ್ಲಿ  ಸಾಧನೆ;ನಲ್ಲೂರು ಲಕ್ಷö್ಮಣ್‌ರಾವ್ ರೇವಣಕರ್‌ವರಿಗೆ ಸನ್ಮಾನ

ಸಂಜೆವಾಣಿ ವಾರ್ತೆ

ದಾವಣಗೆರೆ, ಜು.7;ಲೋಕಸಭಾ ಸದಸ್ಯರೂ, ಮಾಜಿ ಕೇಂದ್ರ ಸಚಿವರಾದ ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್‌ರವರ 71ನೆ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚಿಗೆ ದಾವಣಗೆರೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮ, ಪಾರ್ಶ್ವುವಾಯು ರೋಗದವರಿಗೆ ಉಚಿತ ದಿವ್ಯಾಔಷಧ ವಿತರಿಸುವ ಮೂಲಕ ಸ್ವಯಂ ಸೇವೆ ಸಲ್ಲಿಸಿದ ನಲ್ಲೂರು ಲಕ್ಷö್ಮಣ್‌ರಾವ್ ರೇವಣಕರ್‌ವರಿಗೆ ನಗರದ ಕಿತ್ತೂರುರಾಣಿ ಚೆನ್ನಮ್ಮ ವೃತ್ತದ ಹತ್ತಿರವಿರುವ ಬಯಲು ರಂಗ ಮಂದಿರದ ಬೃಹತ್ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಜಿ.ಎಂ.ಸಿದ್ದೇಶ್ವರರವರ ಜತೆಯಲ್ಲಿ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಮುರುಗೇಶ್ ನಿರಾಣಿ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಎಂ.ಚAದ್ರಪ್ಪ, ಬಿ.ಪಿ.ಹರೀಶ್ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.ದಾವಣಗೆರೆಯ ದೈವಜ್ಞ ಸಮಾಜ ಸೇರಿದಂತೆ ಕಲಾಕುಂಚ ಗೌರವ ಅಧ್ಯಕ್ಷರಾದ ನಲ್ಲೂರು ಲಕ್ಷö್ಮಣ್‌ರಾವ್ ರವರಿಗೆ ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳ ಪರವಾಗಿ ಕುಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಅಭಿನಂದನೆ ಸಲ್ಲಿಸಿದ್ದಾರೆ.