
ಹರಪನಹಳ್ಳಿ.ಮಾ.೯ : ಈ ದೇಶದಲ್ಲಿ ಸಂಬಳವಿಲ್ಲದೆ 24 ಗಂಟೆಗಳ ಕಾಲ ದುಡಿಯುವವರು ಎಂದರೆ ಮಹಿಳೆ ಮಾತ್ರ ತಾಯಿಯಾಗಿ ಹೆಂಡತಿಯಾಗಿ ಮಗಳಾಗಿ ಕುಟುಂಬದ ಯಜಮಾನಿಯಾಗಿ ಎಲ್ಲಾ ಕೆಲಸಗಳಲ್ಲಿ ತೊಡಗಿಕೊಂಡು ಯಾವುದೇ ಆಶೋತ್ತರಗಳು ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವ ಹೆಣ್ಣು ಮಕ್ಕಳು ಭೂಮಿತಾಯಿಗೆ ಸಮ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲತಾ ಮಲ್ಲಿಕಾರ್ಜುನ್ ಅಭಿಪ್ರಾಯ ಪಟ್ಟರು.ಪಟ್ಟಣದ ಕಾಶಿ ಸಂಗಮೇಶ್ವರ ಮಠದಲ್ಲಿ ಶ್ರೀ ಎಂ.ಪಿ ರವೀಂದ್ರ ಪ್ರತಿಷ್ಠಾನ ಹರಪನಹಳ್ಳಿ ವತಿಯಿಂದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಆಚಾರಿಸಲಾಯಿತು ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆವಹಿಸಿ ಉದ್ಘಾಟನೆಯನ್ನು ನೆರವೇರಿಸಿದರು ನಂತರ ಮಾತನಾಡಿದ ಅವರು ದೇಶಕ್ಕೆ ಏನು ಕೊಡುಗೆ ಕೊಡದೆ ಆಗದಿದ್ದರೂ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು ಹೆಣ್ಣು ಮಕ್ಕಳು ಸಂಸಾರದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಹೆಣ್ಣು ಮನಸು ಮಾಡಿದರೆ ಮನೆ ನಂದಗೋಕುಲ ಮಾಡುತ್ತಾರೆ ಹೆಣ್ಣು ಮನಸ್ಸು ಮಾಡದಿದ್ದರೆ ಮನೆ ನೋವಿನ ಗೋಕುಲ ಮಾಡಲಾರರು ಎಂದು ಹೇಳಿದರು.ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಉಳಿಸಿ ಮತ್ತು ಬೆಳಿಸಿಕೊಂಡು ಹೋಗಬೇಕಿದೆ ಎಂದ ಅವರು ಹೆಣ್ಣು ಯಾವುದೇ ಗಂಡಿಗೆ ಕಡಿಮೆ ಇಲ್ಲದಂತೆ ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲು ಇಡುತ್ತಿರುವುದು ಹೆಮ್ಮೆಯ ವಿಷಯ ಪ್ರಪಂಚಾದ್ಯಂತ ಮಹಿಳೆಯರು ಪ್ರತಿಯೊಬ್ಬರೂ ಜಗತ್ತಿಗೆ ಅಪಾರ ಕೊಡುಗೆ ನೀಡುವ ಮೂಲಕ ಜಗತ್ತನ್ನು ಬದಲಾಯಿಸುತ್ತಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಹಿಳೆ ತನ್ನ ಆರ್ಥಿಕ ಅಗತ್ಯಗಳಿಗಾಗಿ ಪುರುಷನ ಮೇಲೆ ಅವಲಂಬಿತವಾಗಿಲ್ಲದೆ. ಅವಳು ಸ್ವತಂತ್ರಳು ಮತ್ತು ತನ್ನನ್ನು ತಾನೇ ನೋಡಿಕೊಳ್ಳುವಷ್ಟು ಬಲಶಾಲಿ.ಎಂದು ತಿಳಿಸಿದರೂವಿಶ್ವ ಮಹಿಳಾ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ಸುಮತಿ ಜಯಪ್ಪ ನೀಡಿದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕಂಚಿಕೇರಿ ಜಯಲಕ್ಷ್ಮಿ, ವನಜಾಕ್ಷಿ, ಕವಿತಾ ಸುರೇಶ್, ಉಮಾ , ಸುಮತಿ ಜಯಪ್ಪ, ಸುವರ್ಣಮ್ಮ.ಸಿ, ದೀಪಾ, ಸಿ.ದ್ರಾಕ್ಷಿಯಿನಿ ಛಲವಾದಿ, ರೇಖಮ್ಮ ಛಲವಾದಿ, ಲಲಿತಮ್ಮ ಸಿ, ಹಾಲಮ್ಮ, ಹೆಚ್ ಬಾಲಾಜಿ, ಜಿಸ್ಯಾನ್ ಹ್ಯಾರಿಸ್, ಎಸ್.ಕೆ.ಸಮೀವುಲ್ಲಾ, ಪ್ರಸಾದ ಕೆ, ಪ್ರಶಾಂತ, ಶೌಕತ್, ಬಸವರಾಜ್ ಮತ್ತೂರು, ಹೆಚ್. ಶಿವರಾಜ್ ,ಸಾದಿಕ್, ಇಬ್ರಾಹಿಂ ಹೆಚ್ ಸಿ.ಅಬ್ಬು,ಅಲಗಿಲವಾಡ ಶಂಕರ್, ಶಿವಪುತ್ರ.ಜಿ ,ಗಾಂಧಿ , ಶಿವುಕುಮಾರ್, ಮುಶ್ರಫ್, ಇತರೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.