ವಿವಿಧ ಕಾಮಗಾರಿಗೆ ಮಲ್ಕಾಪುರೆ ಚಾಲನೆ

ಬೀದರ್:ಮಾ.23: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಹಾಗೂ ವಿಧಾನ ಪರಿಷತ್‍ನ ಅನುದಾನದಲ್ಲಿ ನಗರದ ವಿವಿಧೆಡೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದ ದೇವಿ ಕಾಲೋನಿ, ಗುಮ್ಮೆ ಬಡಾವಣೆ, ವಿದ್ಯಾನಗರ, ಸಾಯಿ ಕಾಲೋನಿ, ಕೈಲಾಸ ನಗರದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ವಿವಿಧ ಬಡಾವಣೆಯಲ್ಲಿ ಒಟ್ಟು 50 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾಮಗಾರಿಗಳನ್ನು ಗುಣಮಟ್ಟದಿಂದ ನಡೆಸಬೇಕು ಹಾಗೂ ಕಾಲಮತಿಯಲ್ಲಿ ಪೂರ್ಣಗೊಳಿಸಬೇಕು. ಬರುವ ದಿನಗಳಲ್ಲಿ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಕೇಂದ್ರ, ರಾಜ್ಯದ ಡಬಲ್ ಇಂಜಿನ್ ಸರ್ಕಾರ ಮೂಲಭೂತ ಸೌಕರ್ಯ ಜತೆಗೆ ರೈತರು, ಬಡವರ ಆರ್ಥಿಕಮಟ್ಟ ಸುಧಾರಣೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವg ಜನಪರ ಆಡಳಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಪ್ರಭುಶೆಟ್ಟಿ, ಪ್ರಮುಖರಾದ ರಾಜೇಶ್ ಪಪ್ಪು, ಪೀರಪ್ಪ ಯರನಳ್ಳಿ, ಧನರಾಜ ಹಂಗರಗಿ, ದತ್ತು ಪಾಟೀಲ್, ಸಂತೋಷ, ಉಮಾಕಾಂತ ಮೀಸೆ ಇತರರಿದ್ದರು.