ವಿವಿಧ ಕಾಮಗಾರಿಗೆ ಭೂಮಿಪೂಜೆ

ಚನ್ನಮ್ಮನ ಕಿತ್ತೂರು,ಮಾ6: ತಾಲೂಕಿನ ಕುರಗುಂದ, ಹೊಳೆಹೊಸೂರು. ಮಾರ್ಗನಕೊಪ್ಪ. ಕೇರಕೊಪ್ಪ ಗ್ರಾಮಗಳಲ್ಲಿ ನೀರಾವರಿ ಇಲಾಖೆಯಿಂದ ಸಿಸಿ ರಸ್ತೆ ಕಾಮಗಾರಿಗೆ ಮತ್ತು ಎಂ ಕೆ ಹುಬ್ಬಳ್ಳಿ ಹತ್ತಿರ ಶ್ರೀ ಮಲಪ್ರಭಾ ನದಿಯ ದಡದಲ್ಲಿಯ ಶ್ರೀ ನರಸಿಂಹ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಶಾಸಕ ಮಹಾಂತೇಶ ದೊಡ್ಡ ಗೌಡರ ನೆರವೇರಿಸಿದರು.
ನಂತರ ಅವರು ಮಾತನಾಡಿ ಶೀಘ್ರ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ನಮ್ಮ ಸರ್ಕಾರ ನಮ್ಮ ಕ್ಷೇತ್ರಕ್ಕೆ ಸುಮಾರು ರೂ. 2500 ಕೋಟಿ ಹಣ ನೀಡಿ ಅಭಿವೃದ್ಧಿಗೊಳಿಸಿದೆ ಇನ್ನುಳಿದ ಕಾಮಗಾರಿಗಳನ್ನು ಸಹ ಪೂರ್ಣಗೊಳಿಸಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯ ಸಾರ್ವಜನಿಕರ ಮನೆ ಮನೆ ಬಾಗಿಲಗೆ ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ.
ಈ ವೇಳೆ ಮುಖಂಡರುಗಳಾದ ಶ್ರೀಕರ ಕುಲಕರ್ಣಿ, ಅಪ್ಪಣ್ಣ ಪಾಗದ, ರಾಜು ಡೂಗನವರ, ರಾಜು ಬೆಂಡಿಗೇರಿ, ಜಗದೀಶ ಜ್ಯೋತಿ, ಸಾವಿತ್ರಿ ಹೊನ್ನಣ್ಣನವರ ಸೇರಿದಂತೆ ಇತರರಿದ್ದರು.