ವಿವಿಧ ಕಾಮಗಾರಿಗಳ ಉದ್ಘಾಟನೆ ಜ.30 ರಂದು:ಡಿಸಿಎಂ ಕಾರಜೋಳ

ಚಡಚಣ:ಜ.10:ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಪ್ರವಾಶಿ ಮಂದಿರದ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಜ.30 ರಂದು ಚಡಚಣದಲ್ಲಿ ನೆರವೇರಿಸಲಾಗುವದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಉಮರಜ ಗ್ರಾಮದ ಬಿಜೆಪಿ ಮುಖಂಡ ಸಿದ್ದು ಗುಡ್ಡಾಪೂರ ಈಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವ ಪ್ರಯುಕ್ತ ಶನಿವಾರ ಕುಟುಂಸ್ಥರಿಗೆ ಸಾಂತ್ವನ ಹೇಳಿ,ಚಡಚಣದ ಪ್ರವಾಶಿ ಮಂದಿರಕ್ಕೆ ಆಗಮಿಸಿದಾಗ ಸಾರ್ವಜನಿಕರಿಂದ ಸನ್ಮಾನ ಹಾಗೂ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ನೂತನ ಚಡಚಣ ತಾಲ್ಲೂಕು ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ.ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಉಪ ವಿಭಾಗಿಧಿಕಾರಿ ಹಾಗೂ ತಹಶಿಲ್ದಾರಗೆ ಸೂಚಿಸಿದ್ದೇನೆ. ಸೂಕ್ತ ನಿವೇಶನ ದೊರೆಯದಿದ್ದಲ್ಲಿ ತಮ್ಮ ಇಲಾಖೆಯ ಪ್ರವಾಶಿ ಮಂದಿರದ ಆವರಣದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುವದು ಎಂದರು.

ಸಂಪೂರ್ಣವಾಗಿ ಕಿತ್ತು ಹಾಳಾಗಿರುವ ಝಳಕಿ –ಶಿರಾಡೋಣ ವರೆಗಿನ ರಾಜ್ಯ ಹೆದ್ದಾರಿ ಪುನರ್‌ ನಿರ್ಮಾಣ ಹಾಗೂ ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಪ್ರಮೂಖ ರಸ್ತೆ ಕಾಮಗಾರಿ ತಕ್ಷಣ ಪುನರಾರಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದ ಅವರು, ಭಾಗದ ಶಾಸಕ ದೇವಾನಂದ ಚವ್ಹಾಣ ಅಭಿವೃದ್ಧಿ ಕಾಮಗಾರಿಗಳಿಗೆ ನಾನು ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸುತ್ತಿರುವದು ಸರಿಯಲ್ಲ. ಅಭೀವೃದ್ಧಿ ವಿಷಯದಲ್ಲಿ ನಾನೇಂದು ರಾಜಕೀಯ ಮಾಡೊದಿಲ್ಲ. ಅವರು ನನ್ನನ್ನು ಖುದ್ದಾಗಿ ಬೇಟಿ ಮಾಡಿ ಕ್ಷೇತ್ರದ ಅಭೀವೃದ್ಧಿಗೆ ಶ್ರಮಿಸಲಿ.ನಾನು ಅವರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ರಾಮ ಅವಟಿ,ಕಾರ್ಯದರ್ಶಿ ಅಪ್ಪುಗೌಡ ಬಿರಾದಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಭಿಮಾಶಂಕರ ಬಿರಾದಾರ, ಶಿವಸರಣ ಬೈರಗೊಂಡ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ,ಮುಖಂಡರಾದ ಅಪ್ಪುಗೌಡ ಪಾಟೀಲ,ಕಲ್ಲು ಉಟಗಿ,ಪ್ರಭಾಕರ ನಿರಾಳೆ, ಪೀರಪ್ಪ ಅಗಸರ, ವಕೀಲ ಎ.ಆರ್‌.ಕುಲಕರ್ಣಿ,ಮಲ್ಲೇಶಪ್ಪ ಡೊಳ್ಳಿ,ತಹಶಿಲ್ದಾರ ಸುರೇಶ ಚವಲರ,ಕಂದಾಯ ಉಪ ವಿಭಾಗಾಧಿಕಾರಿ ರಾಹುಲ ಶಿಂಧೆ,ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸಿಪಿಐ ಚಿದಂಬರ ಮಡಿವಾಳ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಇದ್ದರು.