ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.03 ಪಟ್ಟಣ ಸೇರಿದಂತೆ ಕೊಟ್ಟೂರು ಹಾಗೂ ಕೂಡ್ಲಿಗಿ ಪಟ್ಟಣಕ್ಕೆ ನಿತ್ಯ ಕುಡಿಯುವ ನೀರು ಪೂರೈಕೆ ಯೋಜನೆಗೆ ಈಗಾಗಲೇ ಟೆಂಡರ್ ಕರೆದಿದ್ದು ಶೀಘ್ರ ಕಾಮಗಾರಿ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್  ಹೇಳಿದರು.
 ತಾಲೂಕಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಮೂಲಭೂತ ಸೌಲಭ್ಯಗಳಿಗೆ ಈಗಾಗಲೇ ಕೆಕೆಆರ್‌ಡಿಬಿ, ಡಿಎಂಎಫ್ ಕೆಎಂಆರ್‌ಸಿ ಯೋಜನೆಯಡಿ 38.94ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಿರುವ ಬನ್ನಿಗೋಳ ಜಾಕ್ ವಾಲ್ ನಿಂದ ಮೂರು ತಾಲೂಕಿಗೆ ನೀರು ಪೂರೈಕೆ ಆಗುತ್ತಿದ್ದು. ಇದನ್ನು ಪ್ರತ್ಯೇಕ ಮೂರು ಪೈಪು ಲೈನ್ ಮೂಲಕ ಅಮೃತ ಯೋಜನೆ ಅಡಿ 23  ಕೋಟಿ  ರೂ. ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ತರಲಾಗುವುದು. ಮಾಲವಿ ಜಲಾಶಯದ ಶಾಶ್ವತ ನೀರಿನ ಯೋಜನೆ ಮುಂದಿನ ದಿನಗಳಲ್ಲಿ ವ್ಯವಸಾಯಕ್ಕೆ ಬಳಸಿಕೊಳ್ಳುಲು ಯೋಜನೆ ರೂಪಿಸಲಾಗುವುದು. ಗೇಟ್ ದುರಸ್ಥಿ ಗೆ  4 ಕೋಟಿ ರೂ. ಬಿಡುಗಡೆಯಾಗಿದೆ. ಐದು ವರ್ಷದಲ್ಲಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಸೇರಿದಂತೆ  ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಂಪಿ  ಚುನಾವಣೆಯ ಬಳಿಕ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸ್ಪಂದಿಸುವಂತಹ ಕೆಲಸ ಮಾಡಲಾಗುವುದು ಎಂದರು.
 ಈ ಸಂದರ್ಭದಲ್ಲಿ ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ಜಿಎಂ ಜಗದೀಶ್ ಹೋಟೆಲ್ ಸಿದ್ದರಾಜು ಸಿದ್ದೇಶ್, ಎ ನಾಗರಾಜ, ಹೊಸಕೇರಿ ವೀರೇಶ್ ಕೆ ರೋಹಿತ್, ರಾಹುಲ್, ಬ್ಯಾಟಿ ನಾಗರಾಜ್, ದೊಡ್ಡಬಸಪ್ಪ ರೆಡ್ಡಿ ಇತರರಿದ್ದರು.