ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ


ಗದಗ,ಮಾ.24: ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ 268.90 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಇಲಾಖೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ನೆರವೇರಿಸಿದರು.
ನಂತರ ಮಾತನಾಡಿದ ಅವರು ಹುಯಿಲಗೋಳ ಗ್ರಾಮಕ್ಕೆ ಇದುವರೆಗೂ ಸುಮಾರು 14.24 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ನನ್ನ ಮತಕ್ಷೇತ್ರದ ಪ್ರತಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಾಮಾನ್ಯ ಆದರೆ ಆರೋಪಗಳು ಸತ್ಯವಾಗಿರಬೇಕು, ಮತಕ್ಷೇತ್ರದ ಪ್ರತಿ ಗ್ರಾಮಗಳು 2018 ರ ಚುನಾವಣೆ ಪೂರ್ವದಲ್ಲಿ ಹೇಗಿದ್ದವು ಈಗ ಯಾವ ರೀತಿ ಅಭಿವೃದ್ಧಿ ಹೊಂದಿವೆ ಎಂಬುದನ್ನು ಆಯಾ ಗ್ರಾಮಗಳ ಮುಂದೆ0iÉ?? ಬ್ಯಾನರ ಹಾಕಿ ತೋರಿಸುತ್ತಿದ್ದೆವೆ. ಸಿ.ಸಿ ಪಾಟೀಲ ಏನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಕೇಳುವವರಿಗೆ ಅವೇ ಉತ್ತರ ಹೇಳುತ್ತವೆ, ಆ ಎಲ್ಲಾ ಕಾರ್ಯಗಳನ್ನು ಮುಂದಿಟ್ಟುಕೊಂಡು ಮುಂಬರುವ ಚುನಾವಣೆಗೆ ಮತಕೇಳಲು ನಿಮ್ಮ ಮನೆಗೆ ಬರುತ್ತೇವೆ ಎಂದರು.
2021-22 ನೇ ಸಾಲಿನ ಹುಯಿಲಗೋಳ ಗಾವರವಾಡ ಬಳಗಾನೂರು ಲಿಂಗದಾಳ ರಸ್ತೆ ಸುಧಾರಣೆ , 2022-23 ನೇ ಸಾಲಿನ ವಿವೇಕ ಶಾಲೆಯ 1 ಕೊಠಡಿ ನಿರ್ಮಾಣ, ಗ್ರಾಮದ ಮಾಗಡಿಯವರ ಮನೆಯಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸಿ.ಸಿ. ರಸ್ತೆ ನಿರ್ಮಾಣ, ಹುಯಿಲಗೋಳ ಕಿರಟಗೇರಿ ರಸ್ತೆ ಹತ್ತಿರದ ಭೀಮರಾಯ ಪಾಟಿ 1ನೇ ರಸ್ತೆಯಿಂದ ಚಂದ್ರು ಪೂಜಾರ ಅವರ ಮನೆಯವರೆಗೆ ಮತ್ತು ರತ್ನವ್ವ ದಾಸರ ಇವರ ಮನೆಯವರೆಗೆ ಸಿ.ಸಿ, ರಸ್ತೆ ನಿರ್ಮಾಣ,2022-23 ನೇ ಸಾಲಿನ ಗದಗ ತಾಲೂಕು ಹುಯಿಲಗೋಳ ಗ್ರಾಮದ ಶ್ರೀ ಶರಣಬಸವೇಶ್ವರ, ಹಿಂಭಾಗದಲ್ಲಿ ಸಿ.ಸಿ.ರಸ್ತೆ ನಿರ್ಮಾಣ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 2022-23 ನೇ ಸಾಲಿನ ಶ್ರೀ ಭಾಷೆ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ಹೀಗೆ ಒಟ್ಟು 268.90 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಪಾರವ್ವ ಗಿಡ್ಡಮಲ್ಲನವರ ಹಾಗೂ ಸದಸ್ಯರು ಮತ್ತು ವಸಂತ ಮೇಟಿ, ನಿಂಗಪ್ಪ ಮಣ್ಣೂರ, ಪ್ರದೀಪ್ ನವಲಗುಂದ, ಮುದಕ್ಕಪ್ಪ ಹಂಚಿನಾಳ, ಬಸವರಾಜ ಮಾಗಡಿ, ನಿಂಗನಗೌಡ ಸಣ್ಣಗೌಡರ ಮತ್ತು ಗ್ರಾಮದ ಹಿರಿಯರು ಯುವಕರು ಪಾಲ್ಗೊಂಡಿದ್ದರು.