ವಿವಿಧ ಕಾಮಗಾರಿಗಳಿಗೆ ಡಿಕೆಸು ಭೂಮಿ ಪೂಜೆ

ಆನೇಕಲ್, ಜು೧೭: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಆಯ್ಕೆಯಾಗಿರುವ ಕೂತಗಾನಹಳ್ಳಿ, ಆವಲಹಳ್ಳಿ, ಗುಡ್ಡಹಟ್ಟಿ, ಅರೇಹಳ್ಳಿ, ಮುತ್ಸಂದ ಮತ್ತು ರಾಚಮಾನಹಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ. ಸರ್ಜಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಘಟ್ಟ ಮೋಹನ್ ಬಾಬು, ಕಾಂಗ್ರೆಸ್ ಮುಖಂಡರಾದ ಆವಲಹಳ್ಳಿ ಶ್ರೀನಿವಾಸ್, ಹುಸ್ಕೂರು ಪಾಪಣ್ಣ, ಅತ್ತಿಬೆಲೆ ಚಂದ್ರಪ್ಪ, ಗಟ್ಟಹಳ್ಳಿ ಸೀನಪ್ಪ. ಗುಡ್ಡಹಟ್ಟಿ ರಘುಪತಿರೆಡ್ಡಿ ಮತ್ತಿತರು ಭಾಗವಹಿಸಿದ್ದರು.