ದೇವದುರ್ಗ.ಅ.೦೮- ಶೈಕ್ಷಣಿಕ ಅಭಿವೃದ್ದಿಗೆ ಹಾಗೂ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ ಎಂದು ಶಾಸಕಿ ಕರೇಮ್ಮ ಜಿ.ನಾಯಕ ಹೇಳಿದರು.
ಡಿ.ಎಂ.ಎಫ್ ಯೋಜನೆಯಡಿ ತಾಲೂಕಿನ ೨೦ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುಲು ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದವರು. ಅಂದಾಜು ಮೊತ್ತ ೨೦೦.೦೦ ಲಕ್ಷ ರೂಗಳ ವೆಚ್ಚಗಳಲ್ಲಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇಲ್ಲಿ ಹೆಚ್ಚುವರಿ ಕೊಠಡಿಗಳ ಅಂದಾಜು ಮೊತ್ತ ೧೬೦.೦೦ ಲಕ್ಷಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಖಾಜ ಗೌಡ, ಸಿಕರೆಸ ಪಾಟೀಲ್, ಶಾಲಂ ಉದ್ದಾರ, ಮುನ್ನಾಭಾಯ್ ಇದ್ದರು.