ವಿವಿಧ ಕನ್ನಡ- ದಲಿತ ಪರ ಸಂಘಟನೆಗಳಿಂದ- ೬೫ನೇ ಕನ್ನಡ ರಾಜ್ಯೋತ್ಸವ ಆಚರಣೆ

ಸಿರವಾರ.ನ.೧- ಕನ್ನಡ ಒಂದು ಭಾಷೆಯಾಗಿರದೆ ತಾಯಿಗಿಂತಲೂ ಹೆಚ್ಚಾಗಿದ್ದೆ, ಇಂತಹ ಭಾಷೆಯನ್ನು ನಿತ್ಯ ಜೀವನದಲ್ಲಿ ಎಲ್ಲಾರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದರೆ ಕನ್ನಡವು ನಮ್ಮ ಮುಂದಿನ ಪಿಳಿಗೆಗೆ ಉಳಿಯುತ್ತದೆ ಎಂದು ಸಿರವಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಉದಯಕುಮಾರ ಹೇಳಿದರು.
ಪಟ್ಟಣದ ನೀರಾವರಿ ಇಲಾಖೆ ಮುಂಭಾಗದಲ್ಲಿ ಇಂದು ವಿವಿಧ ಕನ್ನಡಪರ, ದಲಿತಪರ ಸಂಘಟನೆ, ಜೊತೆಗೂಡಿ ೬೫ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ದ್ವಿವರ್ಣ ದ್ವಜಾರೋಹಣ ಮಾಡಿದ ಮಾತನಾಡಿದ ಅವರು ಮಯೂರ ಶಾಸನಕ್ಕೂ ಪೂರ್ವದಿಂದಲೂ ಕನ್ನಡ ಭಾಷೆ ಚಾಲ್ತಿಯಲ್ಲಿತು. ಅದನ್ನು ಅನೇಕ ಮಹಾನಿಯರು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದಾರೆ ಕನ್ನಡವನ್ನು ನಮ್ಮ ಮುಂದಿನ ಪಿಳಿಗೆಗೆ ಉಳಿಸಿಬೆಳಸಿಕೊಂಢು ಹೊಗಬೇಕಾದರೆ ನಮ್ಮ ಕನ್ನಡವನ್ನು ಮನೆಯಿಂದಲೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾರೂ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅವರೊಂದಿಗೆ ನಾವು ಕನ್ನಡದಲ್ಲಿಯೆ ಮಾತನಾಡಬೇಕು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ದೊಡ್ಡ ಭಾಷೆಯಾಗಿದೆ ಎಂದರು.
ವಿ.ಆರ್.ಎಸ್ ಶಾಲೆಯ ಟಿ.ಬಸವರಾಜ ಮಾತನಾಡಿ ಕನ್ನಡ ಎಂದರೆ ಭಾಷೆಯಲ್ಲ ಅದು ನಮ್ಮ ಹೆತ್ತ ತಾಯಿಯಂತೆ, ನಮಗೆ ಇತ್ತರ ಭಾಷೇಯ ಬಗ್ಗೆ ಅಷ್ಟಾಗಿ ತಿಳಿಯದೆ ಇದ್ದರೂ ಸಹ ಅವರೊಂದಿಗೆ ಅವರದೆ ಆದಂತಹ ಭಾಷೆಯಲ್ಲಿ ಮಾತನಾಡುತ್ತಿರುವುದು ದೌರ್ಭಾಗ್ಯ ಸಂಗತಿಯಾಗಿದೆ. ಜ್ಞಾನ, ವ್ಯವಹಾರಕ್ಕೆ ಇತ್ತರ ಬಾಷೆಯ ಕಲಿಯೋಣ, ಮನೆ, ನೆರೆಹೊರೆಯದವರೊಂದಿಗೆ ಕನ್ನಡದಲ್ಲಿಯೆ ಮಾತನಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸೊಣ ಎಂದರು.
ಕಾರ್ಯಕ್ರಮದ ಕುರಿತು ಪ.ಪಂ ಮುಖ್ಯಾದಿಕಾರಿ ಕೆ.ಮುನಿಸ್ವಾಮಿ, ಬಾಲಕೀಯರ ಪ್ರೌಢಶಾಲೆಯ ಮು.ಗು ಮಂಜುಳಾ ಹೆಚ್, ಡಿ.ಯಮನೂರು ಮಾತನಾಡಿದರು. ಕೊವೀಡ್ ೧೯ ವೈರಸ್ ಹಿನ್ನಲೆಯಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ದ್ವಜಾರೋಹಣಕ್ಕೆ ಮಾತ್ರ ಸಿಮಿತವಾಗಿತು.
ಪಿ.ಎಸ್.ಐ ಸುಜಾತನಾಯಕ, ತಾ.ಪಂ ಅಧ್ಯಕ್ಷ ದೇವರಾಜ ಕುರಕುಂದಿ,ರಮೇಶ ದರ್ಶನಕರ,ಆಯುಷ್ಯ ವೈದ್ಯಾಧಿಕಾರಿ ಡಾ.ಸುನೀಲ್ ಸರೋದೆ, ನಿಂಬಯ್ಯಸ್ವಾಮಿ,ಜ್ಞಾನಭಾರತಿ ಶಾಲೆಯ ಅಧ್ಯಕ್ಷ ವೆಂಟರೆಡ್ಡಿ ಬಲ್ಕಲ್, ಪ.ಪಂ ಸದಸ್ಯರಾದ ನಾಗರಾಜಚಿನ್ನಾನ್, ಚನ್ನಪ್ಪ ನಾಗೋಲಿ, ಸಂದೀಪ್ ಪಾಟೀಲ್, ಕೃಷ್ಣನಾಯಕ,ಇರ್ಪಾನ್, ಮಾರ್ಕಪ್ಪ, ಮಲ್ಲಪ್ಪ,ಹಾಜಿಚೌದ್ರಿ,ಮಹಿಬೂಬ್ ಸಾಬ್ ದೊಡ್ಮನೆ, ದಾನಪ್ಪ,ಮೌಲಾಸಾಬ್ ವರ್ಚಸ್, ಕರವೇ ಯಮನೂರು.ಡಿ, ಶಂಕರಗೌಡ, ಅಮರೇಶಗೌಡ ಹುಣಚೇಡ್, ಕೆ.ರಾಘವೇಂದ್ರ, ದಲಿತಸಂಘಟನೆಯ ಶಂಕರ ಮರಾಠ, ಶಾಂತಪ್ಪಪಿತಗಲ್, ಸೇರಿದಂತೆ ವಿವಿಧಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಇನ್ನಿತರರು ಇದ್ದರು.