ವಿವಿಧ ಕಡೆ ವಿನಯ ಕುಮಾರ ಪ್ರಚಾರ

ರಾಯಚೂರು,ಮೇ.೦೭- ವಿನಯ್ ಕುಮಾರ್ ಅವರು ರಾಯಚೂರು ವಿಧಾನಸಭಾ ಕ್ಷೇತ್ರದ ಹರಿಜನವಾಡ ದೇವಿ ನಗರ ವಾರ್ಡ್ ನಂಬರ್ ವಾರ್ಡ ೩ ರಲ್ಲಿ ಇವತ್ತು ಅದ್ದೂರಿ ಪ್ರಚಾರವನ್ನು ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಅವರು ಚುನಾವಣೆ ಸಮಯಕ್ಕೆ ಬಂದಾಗ ಮಾತ್ರ ಮತದಾರರು ನೆನಪಾಗುತ್ತಿರುವ ಶಾಸಕರಿಗೆ ಈಗ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಿರುವುದು ಯಾವ ಧರ್ಮ, ನಾನು ನಗರಸಭೆ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವಾಗ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಒಳಸಂಚು ಮಾಡಿ ನನ್ನನ್ನು ಅಧಿಕಾರದಿಂದ ತೆಗೆದಾಕಿದರು ಆದಕಾರಣ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧಾರ ಮಾಡಿದ್ದೇನೆ ರಾಯಚೂರಿನಲ್ಲಿ ಹಲವಾರು ಸ್ಲಂ ಬಡಾವಣೆ ಜನರಿಗೆ ಮನೆಗಳ ನಿರ್ಮಾಣ ಮಾಡುತ್ ಸುಳ್ಳು ಹೇಳಿದ ಶಾಸಕ ಡಾಕ್ಟರ್ ಶಿವರಾಜ್ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಲಂ ಗುತ್ತೇದಾರರ ಅವರ ಜೊತೆ ಶಾಮೀಲಾಗಿ ಅನೇಕ ಮನೆಗಳನ್ನು ಹಣವನ್ನು ಭ್ರಷ್ಟಾಚಾರ ಮೂಲಕ ಲೂಟಿ ಮಾಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾರ್ಯಧ್ಯಕ್ಷ ಎನ್.ಶಿವಶಂಕರ್ ಅವರ ಮಾತನಾಡಿ ,”ಕುಮಾರಣ್ಣ ಸರ್ಕಾರ ಆಗುವುದು ಖಚಿತ ಅವರು ಮುಖ್ಯಮಂತ್ರಿಯಾದರೆ ರಾಯಚೂರು ಜಿಲ್ಲೆಯ ಅಭಿವೃದ್ಧಿಯಾಗಿ ವಿಶೇಷ ಅನುದಾನವನ್ನು ತರಲಾಗುವುದು ಏನ್ ಆಸ್ಪತ್ರೆ ನಿರ್ಮಾಣ ಮಾಡಲು ಮೊದಲ ಆದ್ಯತೆ ನೀಡಲಾಗುವುದೆಂದು ಹೇಳಿದರು.
ವಿಶ್ವನಾಥ್ ಪಟ್ಟಿ ಜಿಲ್ಲಾ ಎಸ್ ಸಿ ಘಟಕ ಅಧ್ಯಕ್ಷರು ಮಾತನಾಡಿ ವಾರ್ಡ್ ನಂಬರ್ ೩ ರಲ್ಲಿ ಹಲವಾರು ರಸ್ತೆಗಳಿಗಾಗಿ ನನ್ನ ನೇತೃತ್ವದಲ್ಲಿ ಹೋರಾಟ ಮಾಡಿದ್ದೆ ನನ್ನ ವಿರುದ್ಧ ಶಾಸಕರು ಪ್ರಕರಣವನ್ನು ದಾಖಲಿಸಿದರು ನನ್ನ ಹೋರಾಟದ ಫಲವಾಗಿ ಇವತ್ತು ವಾರ್ಡ್ ನಲ್ಲಿ ರಸ್ತೆಗಳು ನಿರ್ಮಾಣವಾಗಿದೆ ಮುಂದಿನ ದಿನಗಳಲ್ಲಿ ಈ ಬಡಾವಣೆಯ ಜನತೆಯ ಅಭಿವೃದ್ಧಿಗಾಗಿ ನಾನು ಶ್ರದಾ ಶ್ರಮಿಸುತ್ತೇನೆ ಈ ಬಾರಿ ಜೆಡಿಎಸ್ ಯಿಂದ ಸ್ಪರ್ಧಿಸಿದ ವಿನಯ್ ಕುಮಾರ್ ಅವರಿಗೆ ತಮ್ಮ ಮತವನ್ನು ನೀಡುವಂತೆ ಕರೆ ನೀಡಿದರು.
ಗೌರವಾಧ್ಯಕ್ಷ ಯು ಖಾನ್ ಅವರು ಮಾತನಾಡಿ ಮುಸ್ಲಿಂ ಬಾಂಧವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷವು ಅನ್ಯಾಯ ಮಾಡಿದೆ ವಿಶೇಷವಾಗಿ ಮುಸ್ಲಿಂರ ಬಾಂಧವರ ಪರವಾಗಿ ಧ್ವನಿ ಎತ್ತಿದ ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ತಮ್ಮ ಮತ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಂ. ವಿರುಪಾಕ್ಷಿ, ಶಿವನದ ಶಿವಕುಮಾರ್ ಯಾದವ್, ಬಿಕೆ ಬಾಬು, ಭೀಮಣ್ಣ, ಅಮ್ಜದ್, ಶಾಲಂ, ಮಂಜು, ಪ್ರಧಾನ ಈರಮ್ಮ ಉಪಸ್ಥಿದ್ದರು.