
ಸಿರವಾರ,ಮೇ.ಂ೮- ಭವ್ಯ ಭಾರತದಲ್ಲಿ ಸಾರ್ವಜನಿಕರಿಗೆ ಹಕ್ಕುಗಳನ್ನು ಸ್ವಾತಂತ್ರ್ಯವನ್ನು ಹೇಗೆ ನೀಡಿದ್ದಾರೋ ಅದರಂತೆ ಮತದಾನದ ಕರ್ತವ್ಯವನ್ನು ಸಹ ನೀಡಿದೆ, ಮತದಾನ ಪವಿತ್ರ ಕಾರ್ಯವಾಗಿದೆ, ಎಲ್ಲಾರೂ ಮೇ ೧೦ರಂದು ಮತದಾನ ಮಾಡಿ ಎಂದು ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಹೇಳಿದರು.
ಪಟ್ಟಣ ಪಂಚಾಯತಿ ಹಳೆ ಕಟ್ಟಡದಿಂದ ಮುಖ್ಯರಸ್ತೆಯ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೂ ಜಾಗೃತಿ ಜಾಥವನ್ನು ಮಾಡಿ ಬಸವೇಶ್ವರ ವೃತ್ತದಲ್ಲಿ ಪ್ರತಿಜ್ಞಾ ವಿಧಿ ಭೋದಿಸಿದ ಅವರು ೧೮ ವರ್ಷ ತುಂಬಿದ ಪ್ರತಿಯೊಬ್ಬ ಸ್ತ್ರೀ- ಪುರುಷ, ತೃತೀಯ ಲಿಂಗದವರು ಮತದಾನ ಮಾಡಲು ಅರ್ಹರಾಗಿದ್ದಾರೆ. ಮತದಾನ ದಿನದಂದ ಚುನಾವಣೆಯಲ್ಲಿ ಸ್ಪರ್ದೇ ಮಾಡಿರುವ ಅಭ್ಯರ್ಥಿಗಾದರೂ, ಅಥವಾ ನೋಟಾಕಾದರೂ ಮತದಾನ ಮಾಡಿ ಒಟ್ಟಿನಲ್ಲಿ ಸಂವಿಧಾನ ನಮಗೆ ನೀಡಿರುವ ಹಕ್ಕನೂ ಸದುಪಯೋಗ ಮಾಡಿಕೊಳಬೇಕು. ಮತ ಮಾರಾಟ ಮಾಡುವ ವಸ್ತು ಅಲ, ನನ್ನ ಮತ ಮಾರಾಟ ಮಾಡುವುದಿಲ ಎಂಬ ಉದ್ಹಾರಣೆ ನಾಮಪಲಕವನ್ನು ಮನೆಯ ಮುಂದೆ ಅಳವಡಿಸಿ. ಸುಭದ್ರ ಪ್ರಜಾ ಪ್ರಭುತ್ವ ಉಳಿಯಬೇಕಾದರೆ ಎಲ್ಲಾರೂ ಮೇ೧೦ ರಂದು ಕಡ್ಡಾಯವಾಗಿ ಮತದಾನ ಮಾಡೊಣ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅದಿಕಾರಿ ನಾಗರತ್ನಾ ಮಾತನಾಡಿ ಒಂದು ಹೆಣ್ಣು ಮಗುವಿಗೆ ಹೇಗೆ ಒಳೇಯ ಹುಡುಗಯನ್ನು ಹುಡುಕಿ ಮದುವೆ ಮಾಡಿದಂತೆ ಒಳೇಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಒಳೇಯ ನಾಯಕರು ಆಯ್ಕೆಯಾದರೆ ದೇಶ ರಕ್ಷಣೆ ಮಾಡುತ್ತಾರೆ ಆದರಿಂದ ಕಡ್ಡಾಯ ಮತದಾನ ಮಾಡಿ ಎಂದರು. ಈ ಸಂದರ್ಭದಲ್ಲಿ ಸುಮುದಾಯ ಸಂಘಟನಾಧಿಕಾರಿ ಹಂಪಯ್ಯಪಾಟೀಲ್, ಆರೋಗ್ಯ ಸಹಾಯಕಿ ಸುನೀತಾ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಶರಣಬಸವ,ಸಚೀನ್ ಚ್ಯಾಗಿ, ವಿರೇಶ ನೇಕಾರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.