ವಿವಿಧ ಆಸನಗಳೊಂದಿಗೆ ಮಲ್ಲಕಂಬ ಆಟ ಪ್ರದರ್ಶನ

ತಾಳಿಕೋಟೆ:ಜೂ.26: ಬಾಗಲಕೋಟ ಜಿಲ್ಲೆಯ ತುಳಸಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಕುವೇಂಪು ಪ್ರಾಥಮಿಕ ಶಾಲೆ ತುಳಸಿಗೇರಿ ವಿದ್ಯಾರ್ಥಿ, ವಿಧ್ಯಾರ್ಥಿನಿಯರಿಂದ ಅದ್ಭುತ್‍ವಾದ ಮಲ್ಲಕಂಬದ ಕ್ರೀಡೆ ಪ್ರದರ್ಶನಗೊಂಡಿತು.

ಗ್ರಾಮದೇವತೆಯ ಜಾತ್ರೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಏರ್ಪಡಿಸಲಾದ ಈ ಮಲ್ಲಕಂಬ ಪ್ರದರ್ಶನ 30, 40, ಕ್ಕೂ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಈ ಕ್ರೀಡೆಯಲ್ಲಿ ಪೋಲ್ ಮಲ್ಲಕಂಬ ಪ್ರದರ್ಶನ ಹಾಗೂ ರೋಪ ಮಲ್ಲಕಂಬದ ಆಟ, ಪ್ರದರ್ಶನಗೊಂಡಿತು. ಈ ಆಟಗಳಲ್ಲಿ ದಸರಂಗ, ಸಲಾಮಿ, ಹಾಲಾಸನ, ಭಜರಂಗಾಸನ, ಸಂಖ್ಯಾಸನ, ವೀರಭದ್ರಾಸನ, ಚೋಕಾರ ಆಸನ ಅಲ್ಲದೇ ರೋಪ ಮಲ್ಲಕಂಬ ಕ್ರೀಡೆಯಲ್ಲಿ ಕ್ರಾಸ್, ಪದ್ಮಾಸನ, ಪಶ್ಚಿಮ ಉತ್ತಾಸನ, ಕ್ರೀತ್ತಾಸನ, ಭಜರಂಗಾಸನ, ಪಾದಹಸ್ತಾಸನ, ಒಳಗೊಂಡು ಕೆಲವು ಆಸನಗಳನ್ನು ಪ್ರದರ್ಶಿಸದೊಳಗಲೇ ವರುಣದೇವನ ಕೃಪೆಯಾಗಿ ಸುಮಾರು ಅರ್ದಗಂಟೆಕಾಲ ಮಳೆ ಸುರಿಯುತು. ಈ ಮಳೆಯಲ್ಲಿಯೂ ಕೂಡಾ ವಿಧ್ಯಾರ್ಥಿಗಳು ಪ್ರದರ್ಶನಗಳನ್ನು ನೀಡಿದರು.

ತುಳಸಿಗೇರಿಯ ಸಿ.ಕೆ.ಚೆನ್ನಾಳ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಜರುಗಿದ ಈ ಮಲ್ಲಕಂಬ ಪ್ರದರ್ಶನದಲ್ಲಿ ಶಿಕ್ಷಕರಾದ ಎಂ.ಎನ್.ಮೇಟಿ, ಕೆ.ಜಿ.ಹೊನ್ನಪ್ಪನವರ(ಎಸ್‍ಡಿಎಂಸಿ), ಇವರಲ್ಲದೇ ಆಟಗಾರರಿಗೆ ಸಲಹೆ ಸೂಚನೆ ನೀಡಲು ನಿವೃತ್ತ ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ ಅವರು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರಲ್ಲದೇ ಜಾತ್ರಾ ಕಮಿಟಿಯ ಸದಸ್ಯರುಗಳು ಪಾಲ್ಗೊಂಡಿದ್ದರು.

ಈ ಮಲ್ಲಕಂಬ ಪ್ರದರ್ಶಿಸಿದ ವಿದ್ಯಾರ್ಥಿಗಳು ಸುಮಾರು 25 ಕ್ಕೂ ಮೇಲ್ಪಟ್ಟು ಅಂತರರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಮಕ್ಕಳು ಕರ್ನಾಟಕ್ಕೆ 3ನೇ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಇದು ಅಲ್ಲದೇ ಚೀನಾ ದೇಶಕ್ಕೆ ತರಬೇತಿ ನೀಡಲು ಈ ತಂಡದ ಪರಿಣಿತರನ್ನು ಕಳುಹಿಸಿಕೊಡಲಾಗಿತ್ತು. ಕೋಲೋ ಇಂಡಿಯಾ ಯುಥ್ ಗೇಮ್ಸ್‍ದಲ್ಲಿ ಈ ತಂಡ ಭಾಗವಹಿಸಿತ್ತೆಂದು ಈ ಮಲ್ಲಕಂಬ ಪ್ರದರ್ಶನದ ಉಸ್ತುವಾರಿಗಳು ತಿಳಿಸಿದ್ದಾರೆ.