ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಆಳಂದ :ನ.14:ತಾಲೂಕಿನ ಎಲೆನವದಗಿ ಗ್ರಾಮದ ಸವಾರ್ಂಗೀಣ ಅಭಿವೃದ್ಧಿಗೆ 1 ಕೋಟಿ 82 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
1.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಮಂಜೂರಾದ ರೂ. 27 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

  1. ರೂ. 10 ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣ ಗೋಡೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
  2. ರೂ. 25 ಲಕ್ಷ ವೆಚ್ಚದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
  3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮಂಜೂರಾದ ರೂ. 96 ಲಕ್ಷ ವೆಚ್ಚದಲ್ಲಿ ಜೇ.ಜೇ.ಎಂ. ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಯಿತು.
  4. ನಬಾರ್ಡ್ ಯೋಜನೆಯಡಿ ಮಂಜೂರಾದ ರೂ. 24 ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.
    ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾದ ಅರುಣ ಕುಮಾರ ಬಿರಾದಾರ, ಶರಣಯ್ಯ ಹಿರೇಮಠ, ಸುನೀಲ ಕುಮಾರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಅಭಿಯಂತರರಾದ ಸಂಪತ ಕುಮಾರ, ಜೆಸ್ಕಾಂ ನಿರ್ದೇಶಕರಾದ ವೀರಣ್ಣ ಮಂಗಾಣೆ,ಮುಖಂಡರಾದ ನಾಗೇಂದ್ರಪ್ಪ ರೆಡ್ಡಿ, ಸೂರ್ಯಕಾಂತ್ ಕೌಂಟೆ, ಶಾಂತಕುಮಾರ ಮಡಿವಾಳ, ಅನಂತರೆಡ್ಡಿ,ಗೋಪಾಲ ಪೂಜಾರಿ, ನಿತ್ಯಾನಂದ ಗಣಾಚಾರಿ, ಚಂದ್ರಶೇಖರ್ ರೆಡ್ಡಿ, ಹನುಮಂತ ಚೌಕ್ಕೆ, ಹಾಗೂ ಗ್ರಾಮದ ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.