ವಿವಿಧೆಡೆ ರಸ್ತೆ ಸುರಕ್ಷತಾ ಅಭಿಯಾನ

ಸಂಜೆವಾಣಿ ವಾರ್ತೆ
ಹುಮನಾಬಾದ್:ಫೆ.2: ತಾಲ್ಲೂಕಿನ ಹುಡಗಿ, ಜನತಾನಗರ, ಕಪ್ಪರಗಾಂವ್, ಪಟ್ಟಣದ ಆರ್ಬಿಟ್ ಸೇವಾ ಸಂಸ್ಥೆ ಸೇರಿದಂತೆ ಚಿಟಗುಪ್ಪಾ ತಾಲ್ಲೂಕಿನ ತಾಳಮಡಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಮಂಗಲಗಿ ಎಲ್‍ಐನ್ಡ್ಟಿ ಟೋಲ್ ಪ್ಲಜಾದಿಂದ 35ನೇ ರಸ್ತೆ ಸುರಕ್ಷತಾ ಅಭಿಯಾನ ಜರುಗಿತು.
ಎಲ್‍ಐನ್ಡ್ಟಿ ಟೋಲ್ ಪ್ಲಜಾದ ರೂಟ್ ಮ್ಯಾನೇಜರ್ ರೇವಣಸಿದ್ದ ವಾಲಿ ಅವರು ಮಾತನಾಡಿ, ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷಿತ ಬಗ್ಗೆ ಜಾಗೃತಿ ಮೂಡಿಸಿದರು. ರಸ್ತೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಸಬೇಕು, ಕಾರು ಚಾಲಕರು ಸಿಟ್ ಬೆಲ್ಟ್ ಹಾಕಿಕೊಳ್ಳಬೇಕು. ಮಕ್ಕಳು ರಸ್ತೆ ದಾಟುವಾಗ ಎಡ ಮತ್ತು ಬಲ ನೋಡಿಕೊಂಡು ಹೋಗಬೇಕು. ಎಂದ ಅವರು ವಾಹನ ಚಲಾಯಿಸುವಾಗ ಮೋಬೈಲ್ ಬಳಕೆ ಮಾಡಬಾರದು ಎಂದು ತಿಳಿ ಹೇಳಿದರು.
ಎಲ್‍ಐಂಡಟಿ ಮಂಗಲಗಿ ಟುಲ್ ಪ್ಲಾಜಾ ಸಿಬ್ಬಂದಿಗಳಾದ ಅರುಣ್, ಮಹೇಶಕುಮಾರ ಸಾಗರ್, ಲಿಂಗಪ್ಪ, ತಿಪ್ಪಣ್ಣ ಮತ್ತು ವಿಶ್ವನಾಥ್, ದಿಲೀಪ್, ಹುಡಗಿ, ಜನತಾನಗರ, ಕಪ್ಪರಗಾಂವ್, ತಾಳಮಡಗಿ ಶಾಲೆಯ ಮುಖ್ಯಗುರು ಮತ್ತು ಸಹಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು.