ವಿವಿಧೆಡೆ ಕಾರ್ತಿಕ ದೀಪೋತ್ಸವ ಆಚರಣೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.24: ಪಟ್ಟಣದ ಹಲವಾರು ಗ್ರಾಮದ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆಯ ಪ್ರಯುಕ್ತ ದೇವಾಲಯಗಳ ಮುಂದೆ ದೀಪ ಅಲಂಕಾರ ಮತ್ತು ಪೊಜಾ ಕಾರ್ಯಕ್ರಮಗಳು ಆಚರಿಸಲಾಯಿತು.
 ಪಟ್ಟಣದ ಕಾಡಸಿದ್ದೇಶ್ವರ, ದರೂರು ಗ್ರಾಮದ ವೀರಭದ್ರೇಶ್ವರ,ಬಲುಕುಂದಿ ಗ್ರಾಮದ ಬೀರಲಿಂಗೇಶ್ವರ ಹಲವಾರು ಗ್ರಾಮಗಳಲ್ಲಿ ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು.
 ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಎಲೆಪೊಜೆ, ರುಧ್ರಾಭಿಷೇಕ,ದೇವಾಲಯಗಳ ಸುತ್ತಲೂ ದೀಪಗಳ ಅಲಂಕಾರ ಮಾಡಲಾಯಿತು.
  ದರೂರು ಗ್ರಾಮದ ಪ್ರಾಧನ ಅರ್ಚಕ ವೀರೇಶಯ್ಯ‌ ಸ್ವಾಮಿ, ದೇವಸ್ಥಾನದ‌ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಗೌಡ,ಕಾರ್ಯದರ್ಶಿ ಮಾರೆಪ್ಪ ನಾಯಕ,ಬಡಿಗೇರ ಪಂಪಾಪತಿ,ತಳವಾರ ದುರ್ಗಣ್ಣ, ವಿನೋದ್ ಗೌಡ  ಹಾಗೂ ಭಕ್ತಾದಿಗಳು ಇದ್ದರು