ವಿವಿಧೆಡೆ ಅಬಕಾರಿ ಪೊಲೀಸರ ದಾಳಿಮದ್ಯ ವಶ; ಪ್ರಕರಣ ದಾಖಲು

ಹೊಸನಗರ.ಜೂ.೧೧; ತಾಲೂಕಿನ ವಿವಿದೆಡೆ  ಅಬಕಾರಿ ಪೊಲೀಸರು ದಾಳಿ ಮಾಡಿ, ಮಾರಾಟಕ್ಕಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ನಗರ ಗ್ರಾಮದ ಪ್ರಭಾಕರ ಶೆಟ್ಟಿ ಬಿನ್ ಅಂತಯ್ಯ ಶೆಟ್ಟಿ ಎಂಬುವವರಿಗೆ ಸೇರಿದ ಶಬರಿ ರೆಸ್ಟೋರೆಂಟ್ ಮೇಲೆ ದಾಳಿ ನೆಡೆಸಿ, ರೂ 6500 ಮೌಲ್ಯದ 13.140 ಲೀಟರ್ ಭಾರತೀಯ ತಯಾರಿಕ ಮದ್ಯ ವಶಕ್ಕೆ ಪಡೆದು ಮಾಲೀಕ ಹಾಗು ಕ್ಯಾಷಿಯರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಮಳಲಿ-ಚಕ್ರನಗರ ಗ್ರಾಮ ವಾಸಿ ಇಂದಿರಮ್ಮ ಕೊಂ ತಿಮ್ಮಪ್ಪ ಎಂಬುವವರಿಗೆ ಸೇರಿದ ಮನೆ ಅಂಗಳದಲ್ಲಿನ ಕೊಟ್ಟಿಗೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ, ರೂ 14 ಸಾವಿರ ಮೌಲ್ಯದ 34.560 ಲೀಟರ್ ಮದ್ಯ ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಎಲ್. ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ, ಹೊಸನಗರ ಅಬಕಾರಿ ನಿರೀಕ್ಷಕ ಸೈಯದ್ ತಪ್ ಜಿಲ್ ಉಲ್ಲಾ ಹಾಗೂ ಸಿಬ್ಬಂದಿಗಳಾದ ಕಾನ್‌ಸ್ಟೇಬಲ್ ಜಿ.ಎಸ್. ನಾಗರಾಜ್, ಪಾಂಡು ಅಂಬವ್ವಗೋಳ, ಚಾಲಕ ಉಮೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.