ವಿವಿಧೆಡೆ ಅಬಕಾರಿ ದಾಳಿ 3.5 ಲಕ್ಷ ರೂ. ಮೌಲ್ಯದ ಸ್ವದೇಶಿ ಮದ್ಯ ಹಾಗೂ ವಾಹನ ಜಪ್ತಿ

ಕಲಬುರಗಿ.ಮೇ.31:ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಮದ್ಯ ಮಾರಾಟದ ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುವÀವರನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ರವಿವಾರ (ಮೇ 31 ರಂದು) ನಗರದಲ್ಲಿ ವಿವಿಧೆಡೆ ಮಿಂಚಿನ ಅಬಕಾರಿ ದಾಳಿ ನಡೆಸಿ ಸ್ವದೇಶಿ ಮದ್ಯ ಬಿಯರ್, ಟೊಯೊಟೊ ಕಾರ್ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿಪಡಿಸಲಾಗಿದೆ. ಈ ಜಪ್ತಿ ಮಾಡಿದ ಮುದ್ದೇಮಾಲಿನ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ 3,50,000 ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಕಲಬುರಗಿ ಉಪವಿಭಾಗದ ಅಬಕಾರಿ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ರವಿವಾರ (ಮೇ 31 ರಂದು) ಬೆಳಿಗ್ಗೆ 7.15 ಗಂಟೆಗೆ ಕಲಬುರಗಿ ನಗರದ ಎ.ಪಿ.ಎಂ.ಸಿ. ಕಚೇರಿ ಹತ್ತಿರದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಶಯಿತ ಟಿ.ವಿ.ಎಸ್.ಎಕ್ಸೈಲ್-100 ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿ, ವಾಹನ ಹಾಗೂ ವಾಹನದಲ್ಲಿರುವ ಒಂದು ಕೇಸರಿ ಪ್ಲಾಸ್ಟಿಕ್ ಚೀಲದಲ್ಲಿ 180 ಎಂ.ಎಲ್. ಪ್ರಮಾಣದ 96 ಟೆಟ್ರಾ ಪ್ಯಾಕುಗಳು, ಓರಿಜನಲ್ ಚೊಯಿಸ್ ಡಿಲಕ್ಸ್ ವಿಸ್ಕಿ (17.280 ಲೀಟರ್) ಮದ್ಯ ಜಪ್ತಿ ಮಾಡಿಕೊಂಡು ಆರೋಪಿ ವಿರುದ್ಧ ಘೋರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

  ಅದೇ ರೀತಿ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ನೆಹರು ಗಂಜ್ ಹುಮನಾಬಾದ ರಸ್ತೆಯ ಗಾಂಧಿನಗರ ಕಮಾನ ಗೇಟ್ ಹತ್ತಿರದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಶಯಿತ ವಾಹನ ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇದಕ್ಕೆ ಬಳಸಿದ ಒಂದು ನಾಲ್ಕು ಚಕ್ರದ ಟೊಯೊಟೋ ಕಾರ್ (ಖಿಔಙಔಖಿಂ ಇಖಿIಔS)  ವಾಹನ ಹಾಗೂ ವಾಹನದಲ್ಲಿ 4 ಪೆಟ್ಟಿಗಳಲ್ಲಿ 650 ಎಂ.ಎಲ್. ಪ್ರಮಾಣದ 48 ಬಿಯರ್ ಬಾಟಲುಗಳು, ಕಿಂಗ್ ಫೀಶರ್ ಬಿಯರ್‍ನ್ನು ಜಪ್ತಿ ಮಾಡಿಕೊಂಡು ಆರೋಪಿ ವಿರುದ್ಧ ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ ಇಸ್ಮಾಯಿಲ್ ಇನಾಮದಾರ ಅವರು ಘೋರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಈ ಅಬಕಾರಿ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ವಿಠ್ಠಲರಾವ ಎಂ.ವಾಲಿ, ಅಬಕಾರಿ ಉಪ ನಿರೀಕ್ಷಕ ಸಂತೋಷ ಕುಮಾರ, ಬಸವರಾಜ ಎಂ., ಅಬಕಾರಿ ಮುಖ್ಯ ಕಾನಸ್ಟೇಬಲಗಳಾದ ಭೀಮಶೇನರಾವ, ಕಾನಸ್ಟೇಬಲರಾದ ರವಿಕುಮಾರ, ಮಹ್ಮದ ಸಲೀಮೊದ್ದೀನ, ಯಮುನಾಬಾಯಿ ಸೇರಿದಂತೆ ವಾಹನ ಚಾಲಕ ಸುನೀಲಕುಮಾರ ಪಾಲ್ಗೊಂಡಿದ್ದರು.

  ಕಲಬುರಗಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತರಾದ ಎಸ್.ಕೆ. ಕುಮಾರ ಇವರ ನಿರ್ದೇಶನದಂತೆ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿರುವನ್ನು ಪತ್ತೆ ಹಚ್ಚಿ ಮೇಲ್ಕಂಡಂತೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.