ವಿವಿಧೆಡೆ ಅಬಕಾರಿ ದಾಳಿ: ಅಕ್ರಮ ಮದ್ಯ ಜಪ್ತಿ, ಹಲವರ ಬಂಧನ

ಚಿಂಚೋಳಿ,ಮಾ.25- ಚಿಂಚೋಳಿ ವಲಯ ಬೀದರ ಕ್ರಾಸ್‍ನಲ್ಲಿ ರಸ್ತೆ ಗಾವಲು ಮಾಡುವ ಸಮಯದಲ್ಲಿ ಯಾವುದೇ ಲೈಸೆನ್ಸ್ ಪರ್ಮಿಟ್ ಇಲ್ಲದೆ ಟಿವಿಎಸ್ ಎಕ್ಸೆಲ್ ದ್ವಿ ಚಕ್ರ ವಾಹನದ ಮೂಲಕ ಅಕ್ರಮ 4.320 ಮದ್ಯ ಮತ್ತು 7.800 ಲೀ ಬೀಯರ್ ಮದ್ಯ ಸಾಗಾಟ ಮಾಡುವಾಗ ಅದನ್ನು ವಶಪಡಿಸಿಕೊಂಡು ಗೋಪಾಲ ತಂದೆ ಮೋಗಲಪ್ಪ ಮಲಕಪೂರ ಸಾ: ಪತ್ತೇಪೂರ ಎಂಬ ಆರೋಪಿಯ ವಿರುದ್ಧ ಘೋರಾ ಪ್ರಕರಣವನ್ನು ಅಬಕಾರಿ ಉಪ ನಿರೀಕ್ಷಕರು ಮೊಹ್ಮದ ಹುಸೇನ ಪ್ರಕರಣವನ್ನು ದಾಖಲಿಸಿರುತ್ತಾರೆ.
ಚಿಂಚೋಳಿ ವಲಯದ್ ಸುಲೇಪೆಟ್ ಗ್ರಾಮದ ರಸ್ತೆ ಗಾವಲು ಮಾಡುವ ಸಮಯದಲ್ಲಿ ಯಾವುದೇ ಲೈಸೆನ್ಸ್ ಪರ್ಮಿಟ್ ಇಲ್ಲದೆ ಕಪ್ಪು ಮತ್ತು ನೀಲಿ ಬಣ್ಣದ ಫ್ಯಾಶನ್ ಪೆÇ್ರ ದ್ವಿ ಚಕ್ರ ವಾಹನ ಸಂಖ್ಯೆ: ಕೆಎ-36-ಎಸ್- 7948 ಮೇಲೆ 8.640 ಲೀ ಓರಿಜಿನಲ್ ಚಾಯ್ಸ್ ವಿಸ್ಕಿ ಅಕ್ರಮ ಮದ್ಯ ಸಾಗಾಟ ಮಾಡುವಾಗ ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ಮಲ್ಲಿಕಾರ್ಜುನ ತಂದೆ ಚಂದ್ರಪ್ಪ ಮೀನಕಾರ ಸಾ: ಹೋಸಳ್ಳಿ ಎಂಬ ಆರೋಪಿಯ ವಿರುದ್ಧ ಘೋರಾ ಪ್ರಕರಣವನ್ನು ಅಬಕಾರಿ ನಿರೀಕ್ಷಕರು ರಾಹುಲ್ ನಾಯಕ ಪ್ರಕರಣವನ್ನು ದಾಖಲಿಸಿರುತ್ತಾರೆ.
ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ. ನಂತರ ಚಿಂಚೋಳಿ ವಲಯ ಚಿಮ್ಮಇದ್ಲಾಯಿ ಗ್ರಾಮಕ್ಕೆ ಹೋಗುವ ರಸ್ತೆಯ ಮದ್ಯೆ ರಸ್ತೆ ಗಾವಲು ಮಾಡುವ ಸಮಯದಲ್ಲಿ ಯಾವುದೇ ಲೈಸೆನ್ಸ್ ಪರ್ಮಿಟ್ ಇಲ್ಲದೆ ಹಿರೋ ಹೊಂಡಾ ಸ್ಲಂಡರ ಪ್ಲಸ್ ವಾಹನ ಸಂಖ್ಯೆ:ಕೆಎ-32-ಇ-5221 ದ್ವಿ ಚಕ್ರ ವಾಹನ ಮೇಲೆ ಅಕ್ರಮ ಮದ್ಯ ಸಾಗಾಟ ಮಾಡುವಾಗ ಅವರಿಂದ 17.280 ಮದ್ಯವನ್ನು ವಶಪಡಿಸಿಕೊಂಡು ಅಲ್ಲಾವೋದ್ದಿನ ತಂದೆ ಮೈಬೂಬಾಲಿ ಸಾ: ಚಿಮ್ಮಇದಲಾಯಿ ಎಂಬ ಆರೋಪಿಯ ವಿರುದ್ಧ ಘೋರಾ ಪ್ರಕರಣವನ್ನು ಅಬಕಾರಿ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿ ಒಟ್ಟು ಚಿಂಚೋಳಿ ವಲಯದಲ್ಲಿ 3 ದ್ವಿ ಚಕ್ರ ವಾಹನ ಹಾಗೂ 30.240 ಲೀ ಮದ್ಯ ಹಾಗೂ 7.800 ಲೀ ಬೀಯರ ಜಪ್ತಿ ಪಡಿಸಲಾಗಿದೆ ಇದರ ಒಟ್ಟು ಮೌಲ್ಯ 150660/-ರೂಪಾಯಿಗಳಾಗಿರುತ್ತದೆ.
ಸದರಿ ದಾಳಿಯಲ್ಲಿ ಅಬಕಾರಿ ಮುಖ್ಯ ಪೇದೆಗಲಾದ 1) ಗೌರಿಶಂಕರ 2) ರಾಮಕೃಷ್ಣ 3) ಸಲೀಂಮೋದ್ದಿನ್ ಮತ್ತು ಅಬಕಾರಿ ಪೇದೆಗಳಾದ ಗೌತಮಬುದ್ಧ, ಶಿವರಾಜ, ಪುಂಡಲೀಕ, ಸಿದ್ಧಾರೂಡ, ಕಲ್ಲಯ್ಯ ಹಾಗೂ ವಾಹನ
ಚಾಲಕರಾದ ಗುರುನಾಥ ದಾಳಿಯಲ್ಲಿ ಪಾಲಗೊಂಡಿದ್ದರು ಅಂತ ಅಬಕಾರಿ ನಿರೀಕ್ಷಕರಾದ ರಾಹುಲ್
ನಾಯಕ ತಿಳಿಸಿದ್ದಾರೆ