ವಿವಿಧೆಡೆ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಆಚರಣೆ

ಬೀದರ:ಡಿ.7: ನಗರದ ವಿವಿಧೆಡೆ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

ಬಿಜೆಪಿ ಕಚೇರಿ: ನಗರದ ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನೆ ಸೇರಿ ದೇಶಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ಕನಸಿನ ಭಾರತ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ಕೊಡೋಣ. ಅಸ್ಪøಷ್ಯತೆ, ಅಸಮಾನತೆ ತೊಲಗಿಸಿ ಸಂವಿಧಾನ ಶಿಲ್ಪಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸೋಣ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಪಕ್ಷದ ಕಲಬುರ್ಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬುಡಾ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಜಯಕುಮಾರ ಕಾಂಗೆ, ಅರಹಂತ ಎಸ್, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಅನಿಲ್ ರಾಜಗೀರಾ, ಸುಭಾಷ ಮಡಿವಾಳ, ಸಂಜು ಇದ್ದರು.

ಖೇಣಿ ಕಚೇರಿ: ನಗರದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ ಖೇಣಿ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.
ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ನಡೆಯಬೇಕಾಗಿದೆ ಎಂದು ಅವರು ಹೇಳಿದರು.

ಮುಖಂಡರಾದ ಕರೀಂಸಾಬ್ ಕಮಠಾಣ, ದೇವೇಂದ್ರಪ್ಪ, ಶಿವಾನಂದ ಗಟ್ಟಿ, ಲೋಕೇಶ ಮಂಗಲಗಿ, ಶಿವಕುಮಾರ ತುಂಗಾ, ರಾಜಕುಮಾರ ಮಡಕಿ, ವೀರಶೆಟ್ಟಿ ದೇಸಾಯಿ, ಜುಬೇರ್ ಅಮಲಾಪುರ, ಜಯಪ್ರಕಾಶ, ಮೋಯಿಜ್ ಪಠಾಣ್, ಅಶೋಕ ಶೇಕಾಪೂರ, ಸಂದೀಪ ಉದಗಿರೆ, ಬಸವರಾಜ ವಡ್ಡೆ ಇದ್ದರು.

ಭೀಮಶಕ್ತಿ ಕಚೇರಿ: ಇಲ್ಲಿಯ ಚಿಟ್ಟಾ ರಸ್ತೆಯಲ್ಲಿ ಇರುವ ಶ್ರೀನಗರ ಕಾಲೊನಿಯ ರಾಷ್ಟ್ರೀಯ ಭೀಮಶಕ್ತಿ ಸಂಘಟನೆ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಾಜಕುಮಾರ ಭಾವಿಕಟ್ಟಿ ಪೂಜೆ ಸಲ್ಲಿಸಿದರು.
ರಾಜ್ಯ ಕಾರ್ಯದರ್ಶಿ ರಾಜಕುಮಾರ ನಾಗೂರೆ, ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರಜೀತ್ ಮಿತ್ರಾ, ಕಾರ್ಯದರ್ಶಿ ರಮೇಶ ಹಿಪ್ಪಳಗಾಂವ್, ಬೀದರ್ ನಗರ ಘಟಕದ ಅಧ್ಯಕ್ಷ ಶ್ರೀಮಂತ ಕೋಟೆ ಇದ್ದರು.