ವಿವಿಧೆಡೆಯಲ್ಲಿ ಹನುಮ ಜಯಂತಿ ಆಚರಣೆ

ವಿಜಯಪುರ: ಏ.24:ನಗರದಲ್ಲಿ ಹನುಮ ಜಯಂತಿ ಅಂಗವಾಗಿ ಮಂಗಳವಾರ ನಡೆದ ಉತ್ಸವ, ಪೂಜೆಯಲ್ಲಿ ನಗರ ಶಾಸಕರ ಪುತ್ರ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಭಾಗವಹಿಸಿ, ಶ್ರೀ ಆಂಜನೇಯನ ದರ್ಶನಾರ್ಶೀವಾದ ಪಡೆದುಕೊಂಡು, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದರು.
ವಾರ್ಡ್ ನಂ.4ರ ವ್ಯಾಪ್ತಿಯ ಭೂತನಾಳ ಕೆರೆಯ ಹತ್ತಿರ ಇರುವ ಘಂಟೆ ಆಂಜನೇಯ ದೇವಸ್ಥಾನ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ವಾರ್ಡ ನಂ.8ರ ಚಾಲುಕ್ಯ ನಗರದ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು. ನಂತರ ಗುಜ್ಜರ ಗಲ್ಲಿಯ ಹನುಮಾನ ದೇವಸ್ಥಾನ ಹಾಗೂ ವಜ್ರ ಹನುಮಾನ ದೇವಸ್ಥಾನಕ್ಕೆ ತೆರಳಿ ಪೂಜೆಯಲ್ಲಿ ಭಾಗವಹಿಸಿದರು.
ಎಲ್ಲಾ ದೇವಸ್ಥಾನಗಳಲ್ಲಿಯೂ ಕಮಿಟಿ ಪದಾಧಿಕಾರಿಗಳು, ಅಲ್ಲಿನ ನಿವಾಸಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.