ವಿವಿಧಡೆ ವೈಭವದ ಶಂಕರ ಜಯಂತೋತ್ಸವ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ13: ಹೊಸಪೇಟೆಯ ಚಿಂತಾಮಣಿ ಮಠ ಸೇರಿದಂತೆ ವಿವಿಧಡೆ ಆದಿಗುರು ಶ್ರೀ ಶಂಕರರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಚಿಂತಾಮಣಿ ಮಠದಲ್ಲಿ ಶ್ರೀ ಶಂಕರರ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಹಾಗಣಪತಿ ಸಹಸ್ರಮೋದಕ ಹೋಮವನ್ನು ಋತ್ವಿಜರಾದ ಗಣೇಶ್ ಗೋಸಾವಿಯವರು ವಿಧವತ್ತಾಗಿ ನೆರವೇರಿಸಿದರು. ಜಾಗೃತಿ ಪಂಚಕ ಖ್ಯಾತಿಯ ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡದಿಂದ ಸಂಗೀತ ಸೇವೆ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರಸಿಂಹರಾವ್ ಮಹಾರಾಜರಿಗೆ ಶ್ರೀಮಠದಿಂದ ಗೌರವ ಸಲ್ಲಿಸಲಾಯಿತು.
ಕೋಟಿಯ ಶಂಕರಲಿಂಗ ದೇವಸ್ಥಾನ, ಚಿತ್ತವಾಡಗಿಯಲ್ಲಿಯೂ ಸಹ ಶ್ರೀ ಶಂಕರ ಜಯಂತಿಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತು.

One attachment • Scanned by Gmail