ವಿವಿಧಡೆ ಮತಯಾಚಿಸದ ವಿಶ್ವನಾಥ

(ಸಂಜೆವಾಣಿ ವಾರ್ತೆ)ಬಳ್ಳಾರಿ, ಮಾ.14: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಯುವಕರ ತಂಡದ ಗ್ರಾಮೀಣ ಅಭ್ಯರ್ಥಿ ಪಿ.ವಿಶ್ವನಾಥ (ಪಿ. ವಿಜಯಕುಮಾರ್) ಇವರು ಇಂದು ನಗರದ ಹಲವಡೆ ತೆರಳಿ ಮತಯಾಚನೆ ಮಾಡಿದರು.ತಮಗೆ ಹಾಗೂ ತಮ್ಮ ಯುವಕರ ತಂಡದ ಎಲ್ಲಾ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಅವರು ಖ್ಯಾತ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಇವರನ್ನು ಭೇಟಿ ಮಾಡಿ, ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ಭಾಗದ ಸಂಘದ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಬಲಗೊಳಿಸಲು ನನಗೆ ಒಂದು ಅವಕಾಶ ಮಾಡಿಕೊಡಿ, ನಮ್ಮ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ, ಹಾಗೂ ಸಮಾಜದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸಹ ಗುರುತಿಸಿಕೊಂಡಿದ್ದಾರೆ, ಇದು ನಮ್ಮ ಸಂಘದ ಸರ್ವ ದಾನಿಗಳಿಗೂ, ಸರ್ವ ಮಹಾಪೋಷಕರಿಗೂ,ಸದಸ್ಯರಿಗೂ ಸಲ್ಲುವ ಹೆಮ್ಮೆಯ ವಿಷಯ ಎಂದರು.ಈ ಸಂದರ್ಭದಲ್ಲಿ ಅಜೀವ ಸದಸ್ಯರುಗಳಾದ ಜಮಾಪುರ ಪಂಪನಗೌಡ,  ಪ್ರತಾಪ್ ಕುಮಾರ್ ಗೌಡ, ಚೇಳ್ಳ ಗುರ್ಕಿ ಶರಣಬಸವನಗೌಡ, ಮಂಜುನಾಥ್ ಗೌಡ, ಹಡಗಲಿಯ ಭರಣಿ ಪತ್ರಿಕೆ ಸಂಪಾದಕ ಬಸವರಾಜ್ ಸ್ವಾಮಿ, ಶಾಸ್ತ್ರಿ ನಗರದ ಎರಿಸ್ವಾಮಿ, ಹಾಗೂ ವೀರಶೈವ ಯುವ ಮುಖಂಡರುಗಳಾದ ಜೆ. ವಿ.ಮಂಜುನಾಥ, ಮಹಾಂತೇಶ್ ಸವಿನಂದನ್ ಸ್ವಾಮಿ, ಕೊಟ್ರೇಶ್, ಗಿರೀಶ್ , ಶಿವಕುಮಾರ್ ಜಡೆ ಮೂರ್ತಿ ತಿಪ್ಪೇಸ್ವಾಮಿ, ಇನ್ನು ಮುಂತಾದವರು ಉಪಸ್ಥಿತಿ ಇದ್ದರು.