ವಿವಿಧಡೆ ಬಾಬು ಜಗಜೀವನರಾಂ ಜಯಂತಿ ಆಚರಣೆ

ಕೆಂಭಾವಿ:ಎ.6: ಪಟ್ಟಣದ ವಿವಿಧೆಡೆ ಬುಧವಾರ ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಂ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಅವರು ಡಾ. ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಲ್ಲು ವಠಾರ್ ಸೇರಿದಂತೆ ಹಲವರಿದ್ದರು.

ವಾರ್ಡ ನಂ 1ರಲ್ಲಿ ಮಾದಿಗ ಸಮಾಜದ ವತಿಯಿಂದ ನಡೆದ ಡಾ|| ಬಾಬು ಜಗಜೀವನರಾಂ ಜಯಂತಿಯಲ್ಲಿ ರಮೇಶ ಕೊಡಗಾನೂರ ಧ್ವಜಾರೋಹಣ ಮಾಡಿದರು, ಸಾಯಬಣ್ಣ ಎಂಟಮಾನ್ ಪುಷ್ಪಾರ್ಚನೆ ಮಾಡಿದರು. ಪರಮಣ್ಣ ವಠಾರ ಸಿದ್ದು ಎಂಟಮಾನ್, ಹುಸನಪ್ಪ ಬಾಚಿಮಟ್ಟಿ, ಪರಶುರಮ ಎಂಟಮಾನ್, ಈಶ್ವರ ದೊಡಮನಿ, ಶರಣಬಸವ ವಠಾರ, ಜಟ್ಟೆಪ್ಪ ಹಲಗಿ, ಬಸವರಾಜ, ಸುರೇಶ ಮಳಕೇರಿ ಸೇರಿದಂತೆ ಸಮಾಜದ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು. ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಡಿ. ಸಿ. ಪಾಟೀಲ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯಗುರು ಅನಿಲ ಕುಮಾರ, ಬಾಲಕರ ಪ್ರೌಢ ಶಾಲೆಯಲ್ಲಿ ಕೆ. ಆರ್. ಪಾಟೀಲ, ಜೆಸ್ಕಾಂ ಕಚೇರಿಯಲ್ಲಿ ವಲಯಾಧಿಕಾರಿ ಶ್ರೀಶೈಲ್ ತಮದೊಡ್ಡಿ ಡಾ. ಜಗಜೀವನರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಲ್ಲಪ್ಪ, ಯಮನಪ್ಪ, ಬಸವರಾಜ, ಯಮನಪ್ಪ, ಯಲ್ಲಪ್ಪ ಇದ್ದರು. ಬಿಜೆಪಿ ಕಚೇರಿಯಲ್ಲಿ ಮುಖಂಡ ಶ್ರೀನಿವಾಸರೆಡ್ಡಿ ಯಾಳಗಿ ಡಾ. ಜಗಜೀವನರಾಂ ಭವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಮೇಶರೆಡ್ಡಿ, ಮಲ್ಲು ವಠಾರ್, ರಮೇಶ ಇದ್ದರು.