ವಿವಿಎಸ್ ಟ್ರಸ್ಟ್ ನಿಂದ   ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜೂ 21:  ನಗರದ ಶ್ರೀ ವೆಂಕಟೇಶ್ ವರದಾಚಾರ್ಯ ಟ್ರಸ್ಟ್ ನಿಂದ ನಗರದ 150 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಟ್ರಸ್ಟ್‌ನ ಅಧ್ಯಕ್ಷ ಕಲ್ಲೂರು ವೆಂಕಟೇಶಲು ಶೆಟ್ಟಿ ಅವರ ನೇತೃತ್ವದಲ್ಲಿ, ಉಚಿತವಾಗಿ  ವಿತರಿಸಿದೆ.
 ನಗರದ ಬೆಂಗಳೂರು ರಸ್ತೆಯಲ್ಲಿರುವ ಟ್ರಸ್ಟ್ ಕಛೇರಿಯಲ್ಲಿ ನೋಟ್ ಬುಕ್ ವಿತರಿಸಿದ ಅವರು.
ಕಳೆದ ನಾಲ್ಕುವರ್ಷಗಳಿಂದ ನೋಟ್ ಬುಕ್ ವಿತರಿಸುತ್ತಿರುವುದರ ಜೊತೆಗೆ   ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನ‌ ಸೇವೆಯನ್ನ ಮಾಡುತ್ತಿದೆಂದರು.
ಟ್ರಸ್ಟ್ ನ  ಕಾರ್ಯದರ್ಶಿ ತಲ್ಲಂ ರಮೇಶ್. ಖಜಾಂಚಿ ಎಸ್.ಎನ್. ಶ್ರೀನಿವಾಸ್,  ಗೋವಿಂದರಾಜು, ವೆಂಕಟೇಶ್, ಪ್ರವೀಣ್, ಶೈಲಜಾ, ಜಯಲಕ್ಷ್ಮಿ, ಭಾರತಿ, ವನಜ, ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

One attachment • Scanned by Gmail

ReplyForward