ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

ಕಾಸರಗೋಡು, ಜೂ.೮- ವಿವಾಹ ನಿಶ್ಚಯವಾಗಿದ್ದ ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ಬೆಳ್ಳೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂದ ಯುವತಿಯನ್ನು ನೆಟ್ಟಣಿಗೆ ನೇಡಿಯಡ್ಕದ ಸುಬ್ಬ ನಾಯ್ಕ್ ಅವರ ಪುತ್ರಿ ಪ್ರಿಯಾ (22) ಎಂದು ಗುರುತಿಸಲಾಗಿದೆ.

ಈಶ್ವರ ಮಂಗಳದ ಖಾಸಗಿ ಸಂಸ್ಥೆಯ ನೌಕರಿಯಾಗಿದ್ದ ಈಕೆಯ ವಿವಾಹ ಮೇ 13 ರಂದು ಪುತ್ತೂರಿನ ಯುವಕನ ಜೊತೆ ನಿಗದಿಯಾಗಿತ್ತು. ಈ ನಡುವೆ ಲಾಕ್‌ಡೌನ್ ಹಿನ್ನಲೆಯಲ್ಲಿ ವಿವಾಹ ಆಗಸ್ಟ್‌‌ಗೆ ಮುಂದೂಡಲಾಗಿತ್ತು. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯವರು ಮರಳಿ ಬಂದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆದೂರು ಪೊಲೀಸರು ಮಹಜರು ನಡೆಸಿದ್ದಾರೆ.