ವಿವಾಹೇತರ ಸಂಬಂಧದ ಸುಳಿಯಲ್ಲಿ ಪ್ರಿನ್ಸ್

ಲಂಡನ್,ಮಾ.೨೦- ಬ್ರಿಟನ್ ರಾಜಮನೆತನದ ರಾಜಕುಮಾರ ವಿಲಿಯಂ ಮತ್ತು ಅವರ ಪತ್ನಿ ಕೇಟ್ ಮಿಡಲ್ಟನ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕೇಟ್ ಮಿಡಲ್ಟನ್ ಅನಾರೋಗ್ಯದ ಕಾರಣದಿಂದ ಸುದ್ದಿಯಲ್ಲಿದ್ದರು. ಪ್ರಿನ್ಸ್ ವಿಲಿಯಂ ಅವರ ಪತ್ನಿ ಕೇಟ್ ಮಿಡಲ್ಟನ್ ಅವರ ಸ್ನೇಹಿತೆ ಮಾಜಿ ಮಾಡೆಲ್ ರೋಸ್ ಹ್ಯಾನ್ಬರಿ ಅವರೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ ಎಂದು ಅಮೆರಿಕದ ಖ್ಯಾತ ಲೇಖಕ, ಟೀವಿ ನಿರೂಪಕಿ ಸ್ಟೆಫನ್ ಕಾಲಬರ್ಟ್ ಈ ಕುರಿತು ನೀಡಿರುವ ಸ್ಫೋಟಕ ಹೇಳಿಕೆ ಬ್ರಿಟನ್‌ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕೇಟ್ ಮಿಡಲ್ಟನ್ ಹಲವಾರು ದಿನಗಳಿಂದ ಸಾರ್ವಜನಿಕವಾಗಿ ಹೊರಬರದ ಕಾರಣ ಈ ಸುದ್ದಿಗಳು ವೇಗವನ್ನು ಪಡೆಯುತ್ತಿವೆ.
ಪ್ರಿನ್ಸ್ ವಿಲಿಯಂ, ಮಾಜಿ ಮಾಡೆಲ್ ರೋಸ್ ಹ್ಯಾನ್‌ಬರಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಆದರೆ ಇದೆಲ್ಲಾ ಸುಳ್ಳು ಆರೋಪಗಳು ಹಾಗೂ ಗಾಳಿ ಸುದ್ದಿ ಎಂದು ರೋಸ್ ಸ್ಪಷ್ಟನೆ ನೀಡಿದ್ದಾರೆ.
ಹಾನ್ಬರಿ ರಾಜಮನೆತನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾಳೆ, ಏಕೆಂದರೆ ಅವಳು ಪ್ರಿನ್ಸ್ ವಿಲಿಯಂ ಅವರ ಪತ್ನಿ ಕೇಟ್ ಅವರ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು. ರೋಸ್ ಹ್ಯಾನ್ಬರಿ ಅವರು ಡೇವಿಡ್ ಚೋಲ್ಮಾಂಡೆಲಿಯ ಪತ್ನಿ.
ಬ್ರಿಟನ್‌ನ ಯುವರಾಣಿ ಕೇಟ್ ಮಿಡ್ಲಟನ್ ಕೆಲ ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಿರುವ ನಡುವೆಯೇ, ಕೇಟ್ ಬಗ್ಗೆ ರಾಜಮನೆತನವು ಹೇಳಿಕೆ ನೀಡಿದೆ, ಕೆನ್ಸಿಂಗ್ಟನ್ ಅರಮನೆಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಕೇಟ್ ಹೊಟ್ಟೆಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಆದ್ದರಿಂದ ಅವರು ಇನ್ನೂ ಹೊರಗೆ ಹೋಗುತ್ತಿಲ್ಲ ಎಂದು ತಿಳಿಸಲಾಗಿದೆ. ಕೇಟ್ ಮಿಡಲ್ಟನ್ ಮತ್ತು ಪ್ರಿನ್ಸ್ ವಿಲಿಯಂ ೨೦೧೧ ರಲ್ಲಿ ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ – ಪ್ರಿನ್ಸ್ ಜಾರ್ಜ್, ಪ್ರಿನ್ಸೆಸ್ ಷಾರ್ಲೆಟ್ ಮತ್ತುಮತ್ತು ಪ್ರಿನ್ಸ್ ಲೂಯಿಸ್. ಅವರ ಕುಟುಂಬವು ಕೆನ್ಸಿಂಗ್ಟನ್ ಅರಮನೆಯಲ್ಲಿ ವಾಸಿಸುತ್ತಿದೆ ಎಂದು ಹೇಳಲಾಗುತ್ತಿದೆ.