ವಿವಾಹದ ನಂಬಿಕೆ ಹುಟ್ಟಿಸಿ ಟೆಕ್ಕಿಗೆ 10 ಲಕ್ಷ ವಂಚನೆ

ಬೆಂಗಳೂರು, ಏ.8- ಜೀವನ್ ಸಾಥಿ ಡಾಟ್ ಕಾಮ್​ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಗೆ 10 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.
ಕಳೆದ ಫೆಬ್ರವರಿಯಲ್ಲಿ ತನ್ನ ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಯುವತಿ ಅಕೌಂಟ್​ಗೆ ಪ್ರಪೋಸಲ್ ಕಳಿಸಿದ್ದ ಮಧ್ಯಪ್ರದೇಶ ಮೂಲದ ಯುವಕ ಅದಿಕರ್ಶ್ ಶರ್ಮಾ ಎಂಬಾತ ವಂಚಿಸಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ.
ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತೇನೆ. ಹಣ ಕಡಿಮೆ ಬಂದಿದೆ ಎಂದು ಯುವತಿ ಬಳಿ ಯುವಕ ಹೇಳಿ ನಂಬಿಕೆ ಬರುವಂತೆ ಮಾಡಿದ್ದ.
ಮದುವೆಯಾಗುವ ಹುಡುಗ ಎಂಬ ಕಾರಣದಿಂದ ಸಾಫ್ಟ್‌ವೇರ್ ಇಂಜಿನಿಯರ್ ಬ್ಯಾಂಕ್​ನಿಂದ 10 ಲಕ್ಷ ಸಾಲ ಪಡೆದು ಹಣ ಕೊಟ್ಟಿದ್ದಾಳೆ.
ಹಣ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ಢ್​ ಆಫ್ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಮೋಸ ಹೋದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.