ವಿವಾದ ಸೃಷ್ಟಿಸಿದ ಶೌಚಾಲಯ ಸೆಲ್ಫಿ ಸ್ಪರ್ಧೆ

ಮುಂಬೈ, ನ.೧೮-ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ಶೌಚಾಲಯದೊಂದಿಗೆ ಸೆಲ್ಫಿ’ ಸ್ಪರ್ಧೆಯಲ್ಲಿ ಭಾಗವಹಿಸಿ ಎನ್ನುವ ನಾಸಿಕ್‌ನ ಶಿಕ್ಷಣಾಧಿಕಾರಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ನಾಳೆ ನಡೆಯಲಿರುವ ವಿಶ್ವ ಶೌಚಾಲಯ ದಿನದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಶಿಕ್ಷಣಾಧಿಕಾರಿ ಎಲ್ಲಾ ಶಾಲೆಗೆಳಿಗೆ ಈ ರೀತಿಯ ಸುತ್ತೋಲೆ ಹೊರಡಿಸಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ ವ್ಯಕ್ತವಾಗಿದೆ.
ತಮ್ಮ ಶಾಲೆಯ ಶೌಚಾಯಲದಲ್ಲಿ ವಿದ್ಯಾರ್ಥಿಗಳು ಸೆಲ್ಪಿ ತೆಗೆದು ಅದನ್ನು ಕಳುಹಿಸುವಂತೆ ನವೆಂಬರ್ ೧೪ ರಂದು ಶಿಕ್ಷಣಾಧಿಕಾರಿ ಸುತ್ತೋಲೆ ಹೊರಡಿಸಿದ್ದು ತಡೆವಾಗಿ ಬೆಳಕಿಗೆ ಬಂದಿದೆ.
ನಾಳೆ ನಡೆಯಲಿರುವ ವಿಶ್ವ ಶೌಚಾಲಯ ದಿನದ ಅಂಗವಾಗಿ ತಮ್ಮ ‘ಕನಸಿನ ಶೌಚಾಲಯ’ ಸ್ಕೆಚ್ ಹಾಕುವಂತೆ ನಾಸಿಕ್ ಜಿಲ್ಲಾ ಶಿಕ್ಷಣಾಧಿಕಾರಿಗಳ ಆದೇಶ ಶಾಲೆಗಳು ಮತ್ತು ಶಿಕ್ಷಣತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ.
ನಾಸಿಕ್ ಶಿಕ್ಷಣಾಧಿಕಾರಿ ಶಾಲೆಗಳಿಗೆ ಟಾಯ್ಲೆಟ್ ಸೆಲ್ಫಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಹೇಳಿ, ಆಕ್ರೋಶ ಎದುರಿಸುವಮತಾಗಿದೆ, ಈ ಸಂಬಂಧ ನ.೧೪ರಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ಧಾರೆ.
ನಾಳೆ ವಿಶ್ವ ಶೌಚಾಲಯ ದಿನವನ್ನು ಆಚರಿಸಲು ಶಾಲೆಗಳಿಗೆ ಸೂಚನೆ ನೀಡಿದ್ದು, ಇದಕ್ಕಾಗಿ ಶಾಲೆಗಳು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿರೀಕ್ಷೆಯಿದೆ.
ಶಿಕ್ಷಣಾಧಿಕಾರಿಯ ವಿಚಿತ್ರ ಸುತ್ತೋಲೆ, ಸಾರ್ವಜನಿಕವಾಗಿ ಟೀಕೆ ಆಕ್ರೋಶ ವ್ಯಕ್ತವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.