ವಿವಾದಾತ್ಮಕ ಟ್ವೀಟ್: ನಟಿ ಕಂಗನಾ ವಿರುದ್ದ ಎಫ್ ಐ ಆರ್

ಮುಂಬೈ,ಅ.17- ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ರಣಾವತ್ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವಿವಾದಾತ್ಮಕ ಟ್ವೀಟ್ ಸಂಬಂಧ ಬಾಂದ್ರಾದ ಮ್ಯಾಜೆಸ್ಟ್ರೇಟ್ ಮೆಟ್ರೊಪಾಲಿಟನ್ ನ್ಯಾಯಾಲಯ ನಟಿ ಕಂಗನಾ ವಿರುದ್ದ ಎಫ್ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಸೂಚಿಸಿದೆ.

ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಂಡೆಲ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ನ್ಯಾಯಾಲಯ ಸೂಚಿಸಿರುವುದು ಸಮಸ್ಯೆಗೆ ಸಿಲುಕುವಂತೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ಹೊಡೆಯುವ ಬಗ್ಗೆ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು ಇದೀಗ ಕಂಗನಾ ಮತ್ತು ಆಕೆಯ ಸಹೋದರಿ ವಿರುದ್ಧ ಎಫ್ ಐಆರ್ ದಾಖಲೆಗೆ ನ್ಯಾಯಾಲಯದ ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸುವ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿಯ ಟ್ವೀಟ್ ಸಮಾಜವನ್ನು ಒಡೆಯುವ ಹುನ್ನಾರ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಮೇಲ್ನೋಟಕ್ಕೆ ನಟಿ ಕಂಗನಾ ರಣಾವತ್ ಅವರ ಸ್ಪೀಡ್ ಸಮಾಜವನ್ನು ಒಡೆಯುವ ಮತ್ತು ಕೋಮು ಭಾವನೆ ಕೆರಳಿಸುವ ಉದ್ದೇಶಹೊಂದಿದೆ ಹೀಗಾಗಿ ಅವರ ವಿರುದ್ಧ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜಯದೇವ್ ಖುಲೆ ತೀರ್ಪಿನಲ್ಲಿ ಹೇಳಿದ್ದಾರೆ.

ನಟಿ ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 153ಎ, 295ಎ,,124 ಮತ್ತು 36ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ.

ನಟಿ ಕಂಗನಾ ರಣಾವತ್ ಅವರು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಜರಿದಿದ್ದರು ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ವಿರುದ್ದ ಜಟಾಪಟಿಗೆ ಕಾರಣವಾಗಿತ್ತು.

ಶಿವಸೇನೆಯ ಕಾರ್ಯಕರ್ತರು ಭಾರಿ ಪ್ರತಿರೋಧ ಹಾಗೂ ಪ್ರತಿಭಟನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಂಗನಾ ರಣಾವತ್ ಅವರಿಗೆ ವೈ ಫ್ಲಸ್ ಭದ್ರತೆ ನೀಡಿದೆ.