ವಿವಾದದ ಕಿಡಿ ಹೊತ್ತಿಸಿದ ಮಾಹಾ ರಾಜ್ಯಪಾಲ: ಸಿಎಂ,ಸೇರಿ ಪ್ರತಿಪಕ್ಷಗಳ ಖಂಡನೆ

ಮುಂಬೈ, ಜು.30- ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆ ವಿವಾದ ಕಿಡಿ ಹೊತ್ತಿಸಿದ್ದು ಮುಖ್ಯಮಂತ್ರಿ ಏಕನಾಥ್ ಶಿಂಧೆ ,ಎನ್ ಸಿಪಿ, ಶಿವಸೇನೆ ಸೇನೆ ಸೇರಿದಂತೆ ಇತರೆ ಪಕ್ಷಗಳು ರಾಜ್ಯಪಾಲರ ಹೇಳಿಕೆ ವಿರುದ್ದ ತಿರುಗಿ ಬಿದ್ದಿದ್ದಾರೆ..

ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ತೆಗೆದುಹಾಕಿದರೆ, ಇಲ್ಲಿ ಹಣ ಉಳಿಯುವುದೂ ಇಲ್ಲ ಜೊತೆಗೆ. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಿಲ್ಲ ಎನ್ನುವ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಹೇಳಿಕೆಗೆ ವಿವಿಧ ಪಕ್ಷಗಳ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

ಜವಾಬ್ದಾರಿ ಅರಿತು ಮಾತನಾಡಬೇಕು:

ರಾಜ್ಯಪಾಲರು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ನಾವು ಬೆಂಬಲಿಸುವುದಿಲ್ಲ. ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆ. ಅವರು ಸಂವಿಧಾನದ ನೈತಿಕತೆಯ ಅಡಿಯಲ್ಲಿ ಮಾತನಾಡಬೇಕು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿರುಗೇಟು ನೀಡಿದ್ದಾರೆ.

ಮುಂಬೈಗೆ ಮುಂಬೈಕರ್ ಮತ್ತು ಮರಾಠಿ ಜನರ ಕೊಡುಗೆ ನಾವು ಎಂದಿಗೂ ಮರೆಯುವುದಿಲ್ಲ.‌ಇದು ರಾಜ್ಯಪಾಲರ ಗಮನದಲ್ಲಿರಲಿ ಎಂದು ತಿರುಗೇಟು ನೀಡಿದ್ದಾರೆ.

ವಾಪಸ್ ಕರೆಸಿಕೊಳ್ಳಿ: ಕೇಂದ್ರಕ್ಕೆ ಆಗ್ರಹ

ಎಲ್ಲರನ್ನೂ ಸಮಾನವಾಗಿ ಕಾಣುವುದು ರಾಜ್ಯಪಾಲರ ಜವಾಬ್ದಾರಿ. ಆದರೆ ಭಗತ್ ಸಿಂಗ್ ಕೋಶಿಯಾರಿ ಅವರು ಜನರಲ್ಲಿ ಕ್ರೌರ್ಯ ಮತ್ತು ಒಡಕು ಮೂಡಿಸುತ್ತಿದ್ದಾರೆ. ಅವರು ಮರಾಠಿಗರನ್ನು ನೋಯಿಸಿದ್ದಾರೆ.ಹೀಗಾಗಿ ಅವರನ್ನು ಪದಚ್ಯುತಿಗೊಳಿಸಿ ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡುವುದಾಗಿ ಸುಪ್ರಿಯಾ ಸುಳೆ ಹೇಳಿದ್ದಾರೆ‌

ದೇವೇಂದ್ರ ಫಡ್ನವಿಸ್ ಅಥವಾ ಏಕನಾಥ್ ಶಿಂಧೆ ಪ್ರತಿ 10 ದಿನಗಳಿಗೊಮ್ಮೆ ದೆಹಲಿಗೆ ಹೋಗುತ್ತಾರೆ. ಮುಂದಿನ ಬಾರಿ ಅವರಲ್ಲಿ ಒಬ್ಬರು ದೆಹಲಿಗೆ ಭೇಟಿ ನೀಡಿದರೂ ರಾಜ್ಯಪಾಲರನ್ನು ಅವರ ತಾಯ್ನಾಡಿಗೆ ಕಳುಹಿಸುವಂತೆ ಕೇಳಿಕೊಳ್ಳುವುದು ಉತ್ತಮ ಎಂದಿದ್ದಾರೆ‌

ಶಿವಸೇನೆ, ಮತ್ತು ಕಾಂಗ್ರೆಸ್ ನಾಯಕರೂ ಕೂಡ ರಾಜ್ಯಪಾಲರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.