ವಿಳಂಬ ಮಾಡದೆ ಬಿಬಿಎಂಪಿ ಚುನಾವಣೆ ನಡೆಸಲು ಆಗ್ರಹ


ಬೆಂಗಳೂರು, ಜು.೩೦- ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಈ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕರು ಒಕ್ಕಲೂರಿನಿಂದ ಆಗ್ರಹಿಸಿದರು.
ನಗರದಲ್ಲಿಂದು ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಬಿಎಂಪಿ ಮಾಜಿ ಮೇಯರ್ ಸೇರಿದಂತೆ ಹಲವರು ಬಿಬಿಎಂಪಿ ಚುನಾವಣೆ ತಕ್ಷಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪಾಲಿಕೆ ಚುನಾವಣೆ ನೆನೆಗುದಿಗೆ ಬೀದ್ದಿತ್ತು.ಆದರೆ, ಸುಪ್ರೀಂಕೋರ್ಟ್ ಜು. ೨೮ನೇ ತಾರೀಖು ಮಹತ್ವ ಆದೇಶ ನೀಡಿ ಒಂದು ವಾರದೊಳಗೆ ಮೀಸಲಾತಿ ಪ್ರಕಟನೆ ಮಾಡಿ,ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಿದೆ ಎಂದರು.
ಆದರೆ, ಅಧಿಕಾರ ವಿಕೇಂದ್ರೀಕರಣ ವಿರೋಧಿ ನಿಲುವು ಮತ್ತು ಪಾಲಿಕೆ ಚುನಾವಣೆ ಮುಂದೂಡಿಕೆ ಮಾಡಲು ಸರ್ಕಾರ ಷಡ್ಯಂತರ ರೂಪಿಸುತ್ತಿದೆ. ವಾರ್ಡ್ ವಿಂಗಡನೆ, ಮೀಸಲಾತಿ ಮಾಡಲು ೮ ವಾರ ಗಡುವು ನೀಡಿದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಸುಪ್ರೀಂಕೋರ್ಟ್ ಒಂದು ವಾರ ಅವಕಾಶ ನೀಡಿ ಮೀಸಲಾತಿ ಪಟ್ಟಿ ಪ್ರಕಟಣೆ ಮಾಡಬೇಕು ಎಂದು ಆದೇಶ ನೀಡಿದೆ. ಅದರೆ ಸರ್ಕಾರ ಮುಂದೂಡಿಕೆಗೆ ತಂತ್ರ ರೂಪಿಸುತ್ತಿದೆ ಎಂದು ದೂರಿದರು.
ಬಿಜೆಪಿ ಶಾಸಕರು ಹೇಳುವ ಮೀಸಲಾತಿ ಪಟ್ಟಿ ಮಾಡಬೇಡಿ.ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಾತಿ ಮಾಡಿ. ಬೆಂಗಳೂರುನಗರ ೭ ಸಚಿವರು ಇದ್ದಾರೆ. ಅವರು ಬೆಂಗಳೂರು ನಗರ ಅಭಿವೃದ್ದಿ ಕಡೆ ಗಮನಹರಿಸುತ್ತಿಲ್ಲ. ಎರಡು ವರ್ಷದ ಸರ್ಕಾರದ ಸಾಧನೆ ಶೂನ್ಯ. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಸಮರ್ಪಕ ತಲುಪಿವಂತೆ ಮಾಡಲು ಪಾಲಿಕೆಯಲ್ಲಿ ಜನಪ್ರತಿನಿಧಿ ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಸತ್ಯನಾರಾಯಣ್, ಮೋಹನ್ ಕುಮಾರ್ ಪಾಲ್ಗೊಂಡಿದ್ದರು.