
ಕಲಬುರಗಿ :ಏ.12: ನಾಟಕ ಮತ್ತು ಕವಿತೆಗಳ ಮೂಲಕ ಇಂತಹಎಲ್ಲಾ ಅನ್ವೇಷಣೆಗಳಲ್ಲಿ, μÉೀಕ್ಸ್‍ಪಿಯರ್‍ಇಲ್ಲಿಯವರೆಗೆ ಶಿಕ್ಷಣ ತಜ್ಞರು, ವಿದ್ವಾಂಸರು, ಸಿದ್ಧಾಂತಿಗಳು, ಓದುಗರು, ರಂಗಕರ್ಮಿಗಳು ಮತ್ತು ಸಿನಿಪ್ರೇಮಿಗಳಲ್ಲಿ ಮೋಡಿ ಮಾಡುವ ವ್ಯಕ್ತಿಯಾಗಿ ಉಳಿದಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾμÁ ನಿಕಾಯದ ಡೀನ್ ಪೆÇ್ರ. ಬಸವರಾಜ್ ಪಿ. ಡೋಣೂರ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇದೇ ಏಪ್ರಿಲ್ 24 ಮತ್ತು 25ರಂದು ಜರುಗಲಿರುವ ವಿಲಿಯಂ ಶೇಕ್ಸ್‍ಪಿಯರ್: ವ್ಯಾಖ್ಯಾನಗಳು, ಅಳವಡಿಕೆಗಳು ಮತ್ತು ವಿನಿಯೋಗ ಕುರಿತು ಬುಧವಾರ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಕರಪತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ವಿಲಿಯಂ μÉೀಕ್ಸ್ಪಿಯರ್ ಸಾರ್ವಕಾಲಿಕ ಗೌರವಾನ್ವಿತ ಮತ್ತು ವ್ಯಾಪಕವಾಗಿ ಓದಲ್ಪಡುವ ನಾಟಕಕಾರರಲ್ಲಿ ಒಬ್ಬ. ಅವರು ಮಾನವ ಸ್ವಭಾವದ ಬಗೆಗಿನ ನಮ್ಮ ಆಲೋಚನೆಗಳನ್ನು ನಿರಂತರವಾಗಿ ಪ್ರಚೋದಿಸುತ್ತಿದ್ದಾನೆ. ಅವನ ಕೃತಿಗಳನ್ನು ಮಾನವಜೀವನದ ವಿವಿದ ಆಯಾಮಗಳಲ್ಲಿನ ಮೌಲ್ಯಗಳಾದ್ಯಂತ ವ್ಯಾಖ್ಯಾನಿಸಲಾಗಿದೆ, ಅಳವಡಿಸಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಭಾರತದಲ್ಲಿ, ವಸಾಹತುಶಾಹಿ ಯುಗದಲ್ಲಿ ಬ್ರಿಟಿμï ಅಧಿಕಾರಿಗಳನ್ನು ರಂಜಿಸಲು ಷೆಕ್ಸ್‍ಪಿಯರ್‍ನ ನಾಟಕಗಳನ್ನು ಪ್ರದರ್ಶಿಸಲಾಯಿತು. ತರುವಾಯ, μÉೀಕ್ಸ್‍ಪಿಯರ್‍ನ ನಾಟಕಗಳ ಪ್ರದರ್ಶನಗಳ ಬೆಳೆದು ಯಶಸ್ಸು ಕಂಡು, ಅನೇಕ ದೇಶೀಯ ನಾಟಕಕಾರರು μÉಕ್ಸ್‍ಪಿಯರ್‍ನ ನಾಟಕಗಳನ್ನು ಭಾμÁಂತರಿಸಲು ಮತ್ತು ಅಳವಡಿಸಿಕೊಳ್ಳಲು ಪ್ರೇರೇಪಿಸಿತು. ಇದರಿಂದಾಗಿ ಹಲವಾರು ಭಾರತೀಯ ಭಾμÉಗಳಲ್ಲಿ μÉಕ್ಸ್‍ಪಿಯರ್‍ನ ನಾಟಕಗಳನ್ನು ಅನುವಾದಿಸಿ ಅಳವಡಿಸಲಾಯಿತು. ಅಂದಿನಿಂದ ಷೆಕ್ಸ್‍ಪಿಯರ್ ಭಾರತೀಯರ ಕಲ್ಪನೆಯನ್ನು ಸೆರೆಹಿಡಿದು ಆವರಿಸಿಕೊಂಡಿದ್ದಾನೆ ಎಂದು ಅವರು ಹೇಳಿದರು.
ಷೆಕ್ಸ್‍ಪಿಯರ್‍ನ ಕ್ರಿಯಾತ್ಮಕ ದ್ವಂದ್ವತೆಯು ಆತನನ್ನು ಇಂಗ್ಲಿμï ಮತ್ತು ಸಾರ್ವತ್ರಿಕ ನಾಟಕಕಾರನನ್ನಾಗಿ, ಲಿಂಗ ರಹಿತ ಮತ್ತು ಸಮಯಾತೀತ ಬರಹಗಾರನನ್ನಾಗಿ ಮಾಡಿದೆ. ಅವರು ಬೈಬಲ್‍ನ ನಂತರ ಇಂಗ್ಲಿμï ಭಾμÉಗೆ ಹೊಸ ಪದಗಳನ್ನು ಕೊಡುಗೆ ನೀಡಿದ್ದಾರೆ. ಷೆಕ್ಸ್‍ಪಿಯರ್‍ನ ಕಥಾವಸ್ತುಗಳು ಮತ್ತು ಪಾತ್ರಗಳು ಪ್ರತಿಭಾನ್ವಿತವು ಮತ್ತು ಶೂರತ್ವದಿಂದಲೂ ಕೂಡಿದ್ದು ರೂಪಾಂತರ ಮತ್ತು ವಿನಿಯೋಗಕ್ಕಾಗಿ ಅಗಾಧ ಪಾಂಡಿತ್ಯವನ್ನು ನೀಡುತ್ತವೆ. ಅವರು ತಮ್ಮ ಪಾತ್ರ ಮತ್ತು ಕಥೆಗಳೊಂದಿಗೆ ನಮ್ಮ ಕಲ್ಪನೆಯಲ್ಲಿ ಜನಜನಿತರಾಗಿದ್ದಾರೆ, ಅಲ್ಲದೆ ಅದು ತನ್ನದೆ ರೂಪ ಪಡೆದುಕೊಂಡಿದೆ. ಹೀಗಾಗಿ, ಷೆಕ್ಸ್‍ಪಿಯರ್ ಭಾμÉಯ ಬೆಳವಣಿಗೆಯ ವೇಗವನ್ನು ಹೆಚ್ಚಿಸಿದ್ದಾರೆ ಮತ್ತು ನಾವು ನಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವ ವಿಧಾನವನ್ನು ಮರುರೂಪಿಸಲು ಸಹಾಯ ಮಾಡಿದ್ದಾರೆ. ಆದ್ದರಿಂದ ಓದುಗರು, ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಷೆಕ್ಸ್‍ಪಿಯರ್‍ನನ್ನು ಅಧ್ಯಯನ ಮಾಡಲು, ಅನ್ವೇಷಿಸಲು, ವ್ಯಾಖ್ಯಾನಿಸಲು ಮತ್ತು ವೇದಿಕೆಯಲ್ಲಿ ನೋಡಲು ಇಷ್ಟಪಡುತ್ತಾರೆ ಎಂದು ಅವರು ತಿಳಿಸಿದರು.
ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ವಿಚಾರ ಸಂಕಿರಣದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಈ ರೀತಿಯ ಸಮ್ಮೇಳನಗಳು ಜ್ಞಾನವನ್ನು ಪ್ರಸಾರ ಮಾಡಲು ಮತ್ತು ಬುದ್ಧಿಜೀವಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತವೆ. ಇದು ಯುವ ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಮತ್ತು ತಜ್ಞರಿಂದ ಕಲಿಯಲು ವೇದಿಕೆಯನ್ನು ಒದಗಿಸುತ್ತದೆ. ಈ ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸುತ್ತೇನೆ ಮತ್ತು ಶಿಕ್ಷಕರು ಆಗಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕೋರುತ್ತೇನೆ ಎಂದು ಅವರು ಹೇಳಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಪ್ರಕಾಶ್ ಬಾಳಿಕಾಯಿ ಅವರು ಮಾತನಾಡಿ, ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ವಿಲಿಯಂ μÉಕ್ಸ್‍ಪಿಯರ್: ಬದಲಾವಣೆ ಮತ್ತು ನಿಶ್ಚಲತೆ, ಜನಪ್ರಿಯ ಸಂಸ್ಕøತಿಯಲ್ಲಿ ಷೆಕ್ಸ್‍ಪಿಯರ್, μÉಕ್ಸ್‍ಪಿಯರ್ ಮತ್ತು ಅಂಗವೈಕಲ್ಯ ಅಧ್ಯಯನಗಳು, ಪೆÇೀಸ್ಟ್-ಹ್ಯೂಮನಿಸಂ ಮತ್ತು μÉಕ್ಸ್‍ಪಿಯರ್, μÉಕ್ಸ್‍ಪಿಯರ್‍ನ ನಾಟಕಗಳಲ್ಲಿ ಮಾನವ ಸಂಬಂಧಗಳ ಜಟಿಲತೆಗಳು, μÉಕ್ಸ್‍ಪಿಯರ್ ಮತ್ತು ನಾಟಕಗಳಲ್ಲಿನ ಬದಲಾವಣೆಗಳು, μÉಕ್ಸ್‍ಪಿಯರ್ ಮತ್ತು ಟ್ರಾಮಾ ಸ್ಟಡೀಸ್, ಷೆಕ್ಸ್‍ಪಿಯರ್‍ನ ನಾಟಕಗಳಲ್ಲಿ ರಾಜರು ಮತ್ತು ಮೂರ್ಖರು, ಭಾರತೀಯ ಭಾಷೆ, ಚಲನಚಿತ್ರಗಳಲ್ಲಿ μÉಕ್ಸ್‍ಪಿಯರ್, μÉೀಕ್ಸ್‍ಪಿಯರ್‍ನ ಭಾμÁಂತರದಲ್ಲಿಯ ಸವಾಲುಗಳು, μÉಕ್ಸ್‍ಪಿಯರ್‍ನ ನಾಟಕಗಳಲ್ಲಿ ಲಿಂಗದ ಮರು ವ್ಯಾಖ್ಯಾನ, ಸಂಸ್ಕೃತಿಗಳನ್ನು ಓದುವ ಸಾಧನವಾಗಿ ಷೆಕ್ಸ್‍ಪಿಯರ್, μÉಕ್ಸ್‍ಪಿಯರ್ ಮತ್ತು ಸಬಾಲ್ಟರ್ನ್ ಅಧ್ಯಯನಗಳ ಕುರಿತು ಲೇಖನಗಳ ಮಂಡನೆ ಮತ್ತು ಸಂವಾದ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಡಾ. ಸಂಜೀವರಾಯಪ್ಪ ಎನ್.ಸಿ, ಡಾ. ಆಶಿಶ್ ಆಗಸರ್ ಮತ್ತು ಡಾ. ಶ್ರೀಲತಾ ಮಾದಾ ಮುಂತಾದವರು ಉಪಸ್ಥಿತರಿದ್ದರು.