ವಿಲಿಯಂ ಶೇಕ್ಸ್‍ಪಿಯರ್:ಕಾಲಾತೀತ ಮತ್ತು ಪ್ರಸ್ತುತ ವಿಚಾರ ಸಂಕಿರಣ

ಕಲಬುರಗಿ,ಏ.25: ಡಾ.ರಾಜ್ ಕುಮಾರ್ ಮತ್ತು ವಿಲಿಯಂ ಷೇಕ್ಸ್‍ಪಿಯರ್‍ಈ ಇಬ್ಬರು ಮಹಾನ ವ್ಯಕ್ತಿತ್ವಗಳಿಗೆ ಸಮಾನರಾದವರನ್ನು ಗುರುತಿಸುವುದು ಬಹಳ ಕಷ್ಠ. ಶೇಕ್ಸ್‍ಪಿಯರ್‍ನ ಕೊಡುಗೆ ಅದ್ಭುತವಾಗಿದೆ. ಅವರು ಇಂಗ್ಲಿಷ್ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಿಯುಕೆ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ ಹೇಳಿದರು. ಸಿಯುಕೆಯ ಇಂಗ್ಲಿಷ್ ವಿಭಾಗ, ಆಯೋಜಿಸಿದ್ದ ವಿಲಿಯಂ ಶೇಕ್ಸ್‍ಪಿಯರ್: ಕಾಲಾತೀತ ಮತ್ತು ಪ್ರಸ್ತುತ ಕುರಿತ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭಾಷೆಯು ಬುದ್ಧಿವಂತಿಕೆಯ ಬಾಗಿಲು, ಇಂಗ್ಲಿಷ್ ಜಾಗತಿಕ ಬುದ್ಧಿವಂತಿಕೆಗೆ ಬಾಗಿಲು. ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಬೃಹತ್ ಸಾಹಿತ್ಯವು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಉತ್ತಮ ಉದ್ಯೋಗ ಪಡೆಯಲು ಇಂಗ್ಲಿಷ್ ನ ಜ್ಞಾನ ಅಗತ್ಯ. ಇಂಗ್ಲಿಷ್ ಭಾಷೆಯ ಕೊರತೆಯಿಂದಾಗಿ ಅನೇಕ ಜನರು ಬಯಸಿದ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಜಾಗತಿಕ ಭಾಷೆಯಾಗಿದ್ದು, ವಿಶ್ವದ ಜನಸಂಖ್ಯೆಯ ಸುಮಾರು ಶೇ 18 ಇಂಗ್ಲಿಷ್ ಮಾತನಾಡುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಮತ್ತು ಹೆಚ್ಚು ಸಾಮಥ್ರ್ಯ ಹೊಂದಿದ್ದಾರೆ ಆದರೆ ಇಂಗ್ಲಿಷ್ ಭಾಷೆಯ ಕೊರತೆಯಿಂದಾಗಿ ಉನ್ನತ ಶಿಕ್ಷಣ ಮತ್ತು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಆಂಗ್ಲ ವಿಭಾಗದ ಮುಖ್ಯಸ್ಥರಾದ ಪೆÇ್ರ.ಬಸವರಾಜ ಡೋಣೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಚಾರ ಸಂಕಿರಣದ ಸಂಚಾಲಕ ಡಾ.ಮಹೇಂದ್ರ ಎನ್ ಪ್ರಾಸ್ತಾವಿಕ ಮಾತನಾಡಿದರು.ಡಾ.ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರೆ, ಸುಮಂಗಲಾ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಪೆÇ್ರ.ವಿಕ್ರಂ ವಿಸಾಜಿ, ಪೆÇ್ರ.ಬಿ.ಬಿ.ಪೂಜಾರಿ, ಡಾ.ರೇಣುಕಾ ನಾಯಕ್, ಡಾ.ಮಹಿಮಾ, ಡಾ.ಪಿ.ಕುಮಾರ್ ಮಂಗಲಂ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.