ವಿರೋಧ ಪಕ್ಷವಿರುವುದೇ ವಿರೋಧಿಸಲು:ಎಸ್‍ಟಿಎಸ್

ಮೈಸೂರು: ಜ:09: ನಾವು ಸುಳ್ಳು ಅಂಕಿಅಂಶವನ್ನು ನೀಡಿಲ್ಲ, ವಿರೋಧ ಪಕ್ಷದವರು ಇರುವುದೇ ವಿರೋಧ ಮಾಡಲು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಗೆ ಮೂಲ ಇಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಕಳೆದ ಬಾರಿ 550 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದನ್ನು ನಾವು ಕಾಣಬಹುದು. ನಾವೇನು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದ್ದೇವೆಂದು ಹೇಳುತ್ತಿಲ್ಲ. ಕಳೆದ ಬಾರಿ ಮತ್ತು ಈ ಬಾರಿಯಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಗೆಲುವು ಸಾಧಿಸಿದೆ ಎಂಬುದೆಲ್ಲದರ ಅಂಕಿಅಂಶಗಳ ಪಟ್ಟಿಯನ್ನು ಸಿದ್ದಪಡಿಸಿದ್ದೇವೆ. ಪುರಾವೆಗಳು ಕಣ್ಣಮುಂದೆಯೇ ಇದ್ದರೂ ಬಿಜೆಪಿಗೆ ಮೂಲ ಇಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ…? ವಿರೋಧ ಪಕ್ಷದ ಕಾಂಗ್ರೆಸ್‍ನವರು ಇರುವುದೇ ವಿರೋಧಿಸಲು. ಪಕ್ಷದ ಗುರುತಿಲ್ಲದೆ ನಡೆಯುವ ಗ್ರಾ.ಪಂ. ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿತರಿರುತ್ತಾರೆ ಹಾಗೆಯೇ ಯಾವುದೇ ಪಕ್ಷದಿಂದ ಸ್ಪರ್ಧಿಸದೆ ಪಕ್ಷೇತರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳೂ ಇರುತ್ತಾರೆ. ಹಾಗೆಂದ ಮಾತ್ರಕ್ಕೆ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಒಟ್ಟು ಬೆಂಬಲಿತ ಅಭ್ಯರ್ಥಿಗಳ ಮಾಹಿತಿಗಳನ್ನು ತಿಳಿಸುವುದು ಚುನಾವಣಾ ನೀತಿ ಆಯೋಗದ ನಿಮಮವನ್ನು ಅಗೌರವಿಸಿದಂತ್ತಾಗುವುದಿಲ್ಲ. ಚುನಾವಣೆಯ ನಂತರ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಆಗಿನಿಂದ ನಡೆದುಕೊಂಡು ಬಂದಂತಹ ಪದ್ಧತಿ ಇದರಲ್ಲಿ ಯಾವ ತಪ್ಪು ಇಲ್ಲ. 8 ವಿಧಾನಸಭಾ ಕ್ಷೇಗಳಲ್ಲಿ ನಮ್ಮ ಪಕ್ಷದ ಒಟ್ಟು ಬೆಂಬಲಿತರ ಪಟ್ಟಿಯನ್ನು ಜಿಲ್ಲಾ ಹಾಗೂ ಮಂಡಲ ಅಧ್ಯಕ್ಷರ ನೀಡಿದ ಆಧಾರದ ಮೇರೆಗೆ ಪ್ರಕಟಗೊಳಿಸಿದ್ದೇವೆ ಎಂದರು.
ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಅಶ್ವಥ್‍ನಾರಾಯಣ್ ಮಾತನಾಡಿ, ರಾಜ್ಯದಾಧ್ಯಂತ 30 ಜಿಲ್ಲೆಗಳಲ್ಲಿ 5 ತಂಡಗಳನ್ನು ರಚಿಸಿ ಜಿಲ್ಲಾ ಜನ ಸೇವಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜ:11 ಸೋಮವಾರ ಬೆಳಗ್ಗೆ 10:45ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಚಾಮುಂಡೇಶ್ವರಿಯ ಆಶೀರ್ವಾದ ಪಡೆದು 11 ಗಂಟೆಗೆ ಕಲಾಭವನದಲ್ಲಿ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗದೆ. ಒಟ್ಟಾರೆ ಈ ಸಮಾವೇಶದ ಮುಖ್ಯ ಉದ್ದೇಶ ಪ್ರತಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಬಲವನ್ನಾಗಿ ಮಾಡಿ ಜನರಿಗೆ ಪಕ್ಷದ ಸಾಧನೆಯನ್ನು ವಿವರಿಸುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೂಡಾ ಅಧ್ಯಕ್ಷ ರಾಜೀವ್, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಶ್ರೀವತ್ಸ, ಎಲ್. ರಾಜ್‍ಕುಮಾರ್ ಇತರರಿದ್ದರು.