ವಿರೇಶಸ್ವಾಮಿಗೆ ಜ್ಯೋತಿಷ್ಯ ಬ್ರಹ್ಮ ಪ್ರಶಸ್ತಿ

ಚಿಂಚೋಳಿ,ಏ.13- ತಾಲೂಕಿನ ಹಲಕೋಡ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಅರ್ಚಕರಾದ ವೀರೇಶ ಸ್ವಾಮಿ ಅವರಿಗೆ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುರೋಹಿತ ಭಾಸ್ಕರ, ಜ್ಯೋತಿಷ್ಯ ಬ್ರಹ್ಮ, ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ರಾಜ್ಯ ಸಲಹೆಗಾರರು ತೆಲಂಗಾಣ ರಾಜ್ಯ ಪ್ರವಾಸೋದ್ಯಮದ ಮಾಜಿ ಅಧ್ಯಕ್ಷ ಉಪ್ಪಳ ಶ್ರೀನಿವಾಸ್ ಗುಪ್ತಾ, ಜನಗಾಮ ವಿಶೇಷ ಜಿಲ್ಲಾಧಿಕಾರಿ ಅರುಣಾ ರೆಡ್ಡಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಬಿರುದು ಮತ್ತು ಯುಗಾದಿ ನಂದಿ ಸ್ಮರಣಿಕೆಯನ್ನು ಸಮುದ್ರಾಳ ವೇಣುಗೋಪಾಲ ಚಾರಿ ಅವರ ಹಸ್ತದಿಂದ ವಿತರಿಸಲಾಯಿತು ಈ ಸಂದರ್ಭದಲ್ಲಿ ಅರ್ಚಕರಾದ ವಿಜಯಕುಮಾರ, ಇದ್ದರು.