ವಿರೂಪಾಪುರ : ಗ್ರಾ.ಪಂ.ಸದಸ್ಯರಿಗೆ ಮತದಾನ ಮಾಹಿತಿ

ಸಿಂಧನೂರು.ಡಿ.೦೫- ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದಸ್ಯರು ಯಾವ ರೀತಿ ತಮ್ಮ ಮತದಾನ ಹಕ್ಕು ಚಲಾಯಿಸಬೇಕು ಎಂಬುವುದರ ಬಗ್ಗೆ ಶನಿವಾರ ಬೆಳಗ್ಗೆ ಗ್ರಾ.ಪಂ. ಕಾರ್ಯಾಲಯದಲ್ಲಿ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ತಾಲೂಕಿನ ವಿರೂಪಾಪುರ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಗ್ರಾಮ ಪಂಚಾಯತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳಿಂದ ಕೊಪ್ಪಳ-ರಾಯಚೂರು ಅವಳಿ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆಗೆ ಡಿ.೧೦ರಂದು ಮತದಾನ ನಡೆಯಲ್ಲಿದ್ದು. ಚುನಾವಣೆಯಲ್ಲಿ ಮತ ಚಲಾವಣೆ ಪ್ರಕ್ರಿಯೆ ಹಾಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸದಸ್ಯರಿಗೆ ವಿವರವಾಗಿ ತಿಳಿ ಹೇಳಲಾಯಿತು.
ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ ಅಭ್ಯರ್ಥಿಯ ಹೆಸರನ್ನು ಆಧರಿಸಿ ಮತ ಹಾಕಬೇಕಾಗಿದೆ ಮತ ಕುಲಗೇಡದಂತೆ ಸದಸ್ಯರು ಜಾಗೃತಿ ಹಾಗೂ ಎಚ್ಚರಿಕೆವಹಿಸಬೇಕಾದ ಕ್ರಮಗಳ ಬಗ್ಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವೀರಭದ್ರಪ್ಪ ಸದಸ್ಯರಿಗೆ ಮಾಹಿತಿ ನೀಡಿದರು.
ವೀರೂಪಾಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಿಂಗಮ್ಮ, ಉಪಾಧ್ಯಕ್ಷ ಗೋಪಿ, ಸದಸ್ಯರಾದ ಈಶಪ್ಪ, ದೇವಮ್ಮ, ಶ್ರೀನಾಥ್, ನಾಗಮ್ಮ, ದೇವಮ್ಮ, ಅನಸಮ್ಮ, ಅಂಬಮ್ಮ, ಗಂಗಮ್ಮ, ಬಸವರಾಜ, ಪಂಪಾಪತಿ ಸ್ವಾಮಿ, ಶ್ಯಾಮಲಮ್ಮ, ಸಿದ್ದಪ್ಪ ತರಬೇತಿಯಲ್ಲಿ ಹಾಜರಿದ್ದರು.