ವಿರೂಪಾಕ್ಷೇಶ್ವರ ಸ್ವಾಮಿ ಹುಂಡಿಯಲ್ಲಿ 37,34,636 ಕಾಣಿಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ,ಜು.26- ದಕ್ಷಿಣಕಾಶಿ ಖ್ಯಾತಿಯ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಹುಂಡಿಯಲ್ಲಿ 37,34,636 ರೂ. ಕಾಣಿಕೆಸಂಗ್ರಹವಾಗಿದೆ.
ಹಂಪಿ ವಿದ್ಯಾರಣ್ಯ ಮಠದಲ್ಲಿ ಶ್ರೀ ವಿದ್ಯಾರಣ್ಯ ಭಾರತಿ ಸಮ್ಮುಖದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ 37,34,636 ರೂ. ಭಕ್ತರ ಕಾಣಿಕೆ ಹಣ ಸಂಗ್ರಹವಾಗಿದೆ. ವಿರೂಪಾಕ್ಷೇಶ್ವರ ದೇವಾಲಯದ ಕಳೆದ ನವಂಬರ್ 2, 2021ರಲ್ಲಿ ಅಳವಡಿಸಿದ್ದ ಎರಡು ಕಾಣಿಕೆ ಹುಂಡಿಯನ್ನು ಸೋಮವಾರ ತೆರೆದು ಎಣಿಕೆ ಕಾರ್ಯ ನಡೆಸಲಾಯಿತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಯಂ.ಎಚ್.ಪ್ರಕಾಶ್ ರಾವ್, ಸೇರಿದಂತೆ ಬ್ಯಾಂಕ್, ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಭಕ್ತರ ಸಮಕ್ಷಮದಲ್ಲಿ ಹುಂಡಿಯನ್ನು ಎಣಿಕೆ ಮಾಡಲಾಯಿತು.