ವಿರೂಪಾಕ್ಷನ ಹುಂಡಿಯಲ್ಲಿ 37.34 ಲಕ್ಷ ರೂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,26- ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಎರೆಡು ಹುಂಡಿಗಳ ಎಣಿಕೆ ಕಾರ್ಯ ನಿನ್ನೆ ನಡೆದು ಅದರಲ್ಲಿ 37 ಲಕ್ಷದ 34ಸಾವಿರ 636 ರೂ ದೊರೆತಿದೆ ಎಂದು ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ನವೆಂವರ್ ನಿಂದ ಇಲ್ಲಿವರೆಗೆ ದೇವಸ್ಥಾನ ಪ್ರಾಂಗಣದ ಎರೆಡು ಹುಂಡಿಗಳಲ್ಲಿ ಸಂಗ್ರಹವಾಗಿದ್ದನ್ನು ವಿದ್ಯಾರಣ್ಯ ಮಠದ ಆವರಣದಲ್ಲಿ ಎಣಿಕೆ ಮಾಡಲಾಗಿತ್ತು.