ವಿರಾಟ್ ಕೊಹ್ಲಿ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಸಿರವಾರ.ನ.೬- ಟೀಮ್ ಇಂಡಿಯಾದ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ 32 ನೇ ಹುಟ್ಟು ಹಬ್ಬದ ಪ್ರಯುಕ್ತ ಸಿರವಾರ ವಿರಾಟ್ ಕೊಹ್ಲಿ ವಿಧ್ಯಾನಗರ ಯುವ ಬಳಗದ ವತಿಯಿಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿ ಡಾ.ಸುನೀಲ್ ಸರೋದೆ ಅವರ ಸಮ್ಮುಖದಲ್ಲಿ ಅಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ವಿರಾಟ್ ಕೊಹ್ಲಿ ಅವರು ಇನ್ನು ಸಾಕಷ್ಟು ದಾಖಲೆಗಳನ್ನು ಈಗಾಗಲೇ ತಮ್ಮ ಹೆಸರಿಗೆ ಬರೆದು ಕೊಂಡಿರುತ್ತಾರೆ. ಇನ್ನಷ್ಟು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ. “ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ವಿರಾಟ್ ಕೊಹ್ಲಿಯು ನಿಜವಾಗಿಯೂ ಭಾರತ ಕ್ರಿಕೆಟ್‌ನ ದೃವತಾರೆ.
ವಿರಾಟ್ ಕೊಹ್ಲಿಅವರು ಇನ್ನಷ್ಟು ಸಾಧನೆಯನ್ನು ಮಾಡಲಿ ಎಂಬುದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆ. ಇನ್ನೂ ಹೆಚ್ಚಿನ ದಾಖಲೆಗಳನ್ನು ತನ್ನ ಇತಿಹಾಸ ಪುಟದಲ್ಲಿ ಬರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಾದ ಶಿವು ಮಂದಕಲ್, ದುರ್ಗಾ ಪ್ರಸಾದ್, ಗಣೇಶ್ ಐಕಾನ್, ನಿರಂಜನ್ ಚೆರ್ರಿ, ಎಮ್. ಅನಿಲ್ ಕುಮಾರ್, ರಾಮು, ಶಿವು, ಮೌನೇಶ್, ಪ್ರಭುರಾಜ್, ಯಹೋನ, ಮಧುಕುಮಾರ್, ಸುನೀಲ್, ಸತೀಶ್ ಪೈಟರ್, ರಾಜಪ್ಪ, ಕಿರಣ್, ರವಿ, ಎಸ್ ದೇವರಾಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.