ವಿರಾಟ್ ಕೊಹ್ಲಿಗೆ ೩೨ ರ ಸಂಭ್ರಮ

The Captain of the Indian Cricket Team, Virat Kohli and noted actor Anushka Sharma calls on the Prime Minister, Shri Narendra Modi, in New Delhi on December 20, 2017.


ದುಬೈ, ನ. ೫- ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇಂದು ೩೨ನೇ ಹುಟ್ಟುಹಬ್ಬದ ಸಂಭ್ರಮ. ಆಧುನಿಕ ಕ್ರಿಕೆಟ್‌ನಲ್ಲಿ ರನ್ ಮಿಷನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅವರು ಇಂದು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಬಹಳ ದಿನಗಳ ನಂತರ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ನೀಲಿ ಜರ್ಸಿ ತೊಡಲು ಸಿದ್ಧರಾಗಿರುವ ವಿರಾಟ್ ಕೊಹ್ಲಿ ಅವರು ಮುಂಬರುವ ಸರಣಿಗಾಗಿ ಕಾತುರಾಗಿದ್ದಾರೆ
ಯುನೈಟೆಡ್ ಎಮಿರೇಟ್ಸ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಪ್ಲೇ ಆಪ್ ಹಂತ ತಲುಪಿರುವ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ನಾಳೆ ಸನ್ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯಲಿದೆ.ನಾಳಿನ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್ ತಲುಪುವ ಆಸೆ ಜೀವಂತವಾಗಿರಿಸಿಕೊಳ್ಳಲು ವಿರಾಟ್ ಕೊಹ್ಲಿ ಮುಂದಾಗಿದ್ದಾರೆ.
೨೦೦೮ ರಲ್ಲಿ ಭಾರತೀಯ ಕ್ರಿಕೆಟ್ ತಂಡ ಪ್ರವೇಶಿಸಿದ್ದ ವಿರಾಟ್ ಕೋಹ್ಲಿ ಅವರು,ಏಕ ದಿನ ಕ್ರಿಕೆಟ್ ನಲ್ಲಿ ನಂಬರ್ ಒನ್ ಪಟ್ಟದಲ್ಲಿದ್ದಾರೆ ೮೬ ಟೆಸ್ಟ್, ೨೪೮ ಏಕದಿನ ಮತ್ತು ೮೨ ಟಿ-೨೦ ಪಂದ್ಯಗಳ ಮೂಲಕ ಕ್ರಮವಾಗಿ ೭೨೪೦, ೧೧೮೪೭ ಮತ್ತು ೨೭೯೪ ರನ್ ಗಳಿಸಿದ್ದಾರೆ.
ಶುಭ ಹಾರೈಕೆ
೩೨ನೇ ಹುಟ್ಟುಹಬ್ಬ ಆಚರಿಸಿಕೊಂಡ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ತಂಡದ ಅನೇಕ ಆಟಗಾರರು ಮತ್ತು ಐಪಿಎಲ್ ತಂಡದ ಆಟಗಾರರು ಶುಭಹಾರೈಸಿದ್ದಾರೆಸದ್ಯ ಅಬುದಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ನಾಳಿನ ಪಂದ್ಯ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.