ವಿರಾಟ್ ಕೊಹ್ಲಿಗೆ ವಯಸ್ಸಾಯ್ತು ಎಂದ ನೆಟ್ಟಿಗರು

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಯಾವಗಲೂ ಸಕ್ರಿಯರಾಗಿರುತ್ತಾರೆ. ಆದರೆ ಈಗ ಜೋಡಿ ಹಂಚಿಕೊಂಡಿರುವ ಹೊಸ ಫೋಟೋಗೆ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಜೊತೆ ಇರುವ ಫೋಟೋವೋಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕೊಹ್ಲಿ ಬಿಳಿ ಗಡ್ಡದಲ್ಲಿರುವುದನ್ನು ನೋಡಿದ ಅಭಿಮಾನಿಗಳು ನಮ್ಮ ಕಿಂಗ್ ಕೊಹ್ಲಿಗೆ ವಯಸ್ಸಾಯ್ತು ಎಂದು ಕಮೆಂಟ್ ಮಾಡಿದ್ದಾರೆ.
ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ಮುದ್ದಾದ ಮಗಳ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಪತ್ನಿಯ ತ್ಯಾಗ ಪ್ರೀತಿ ಬಗ್ಗೆ ಕೊಹ್ಲಿ ಅನೇಕ ಬಾರಿ ಮಾತಾಡಿದ್ದಾರೆ.
ಮಗಳು ಹುಟ್ಟಿದ ಮೇಲೆ ಬದುಕಲ್ಲಿ ಬಹಳ ಬದಲಾವಣೆ ಆಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದರು. ಅನುಷ್ಕಾ ಶರ್ಮಾ ನಟಿಯಾದ್ರು ಮಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ವಿರಾಟ್ ಪತ್ನಿಯನ್ನು ಹಾಡಿ ಹೊಗಳಿದ್ದರು.
ಸದ್ಯ ಈ ಜೋಡಿಯ ಈ ಹೊಸದಾದ ಫೋಟೋ ಅಭಿಮಾನಿಗಳ ಮನಗೆದ್ದಿದ್ದು, ಕಿಂಗ್ ಕೊಹ್ಲಿ ಜೋಡಿಗೆ ಲೈಕ್‌ಗಳ ಸುರಿಮಳೆಗೈದಿದ್ದು, ನಾನಾ ಬಗೆಯಲ್ಲಿ ಕಮೆಂಟ್‌ಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ.